More

    ಹಂದಿ ಫಾರ್ಮ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ

    ರಾಣೆಬೆನ್ನೂರ: ಹಂದಿ ಫಾರ್ಮ್ ತೆರವುಗೊಳಿಸುವಂತೆ ಆಗ್ರಹಿಸಿ ಇಲ್ಲಿಯ ಮಾರುತಿ ನಗರದ ನಿವಾಸಿಗಳು ಬುಧವಾರ ಫಾಮರ್್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಕಳೆದ 7 ವರ್ಷದಿಂದ ಇಲ್ಲಿ ಹಂದಿ ಫಾರ್ಮ್ನಡೆಸಲಾಗುತ್ತಿದೆ. ಆಗ ಮನೆಗಳು ಕಡಿಮೆ ಇದ್ದವು. ಇದೀಗ ಬಹಳಷ್ಟು ಮನೆಗಳು ನಿರ್ವಣಗೊಂಡಿದೆ. ಆದ್ದರಿಂದ ಹಂದಿ ಫಾರ್ಮ್​ನ್ನು ಬೇರೆಡೆ ಸ್ಥಳಾಂತರಿಸಬೇಕು. ಇದರಿಂದ ವಿಪರೀತ ವಾಸನೆ ಬರುತ್ತಿದೆ. ಸುತ್ತಮುತ್ತಲಿನ ಜಾನುವಾರುಗಳು ಆಹಾರ ಸೇವಿಸಲು ಹಿಂದೇಟು ಹಾಕುತ್ತಿವೆ. ಜನರು ಈ ಮಾರ್ಗವಾಗಿ ಓಡಾಡಲೂ ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಆಗುತ್ತಿದ್ದಂತೆ ದುರ್ವಾಸನೆ ಬಡಾವಣೆ ತುಂಬ ಹಬ್ಬುತ್ತಿದೆ.

    ಫಾರ್ಮ್ ತೆರವುಗೊಳಿಸುವಂತೆ ಎರಡು ವರ್ಷದಿಂದ ನಗರಸಭೆ ಆಯುಕ್ತರಿಗೆ ಮನವಿ ಮಾಡಿ ಸಾಕಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಬಂದು ಫಾಮ್ರ್ ತೆರವುಗೊಳಿಸಬೇಕು. ಇಲ್ಲವಾದರೆ ನಾವೇ ಕಿತ್ತು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

    ನಂತರ ಸ್ಥಳಕ್ಕೆ ಬಂದ ನಗರಸಭೆ ಸದಸ್ಯ ರಮೇಶ ಮರಡೆಮಣ್ಣನವರ ಹಾಗೂ ಆರೋಗ್ಯ ನಿರೀಕ್ಷಕ ಜಗದೀಶ, ಇನ್ಮುಂದೆ ಯಾವುದೇ ಕಾರಣಕ್ಕೂ ಹಂದಿ ತರಬಾರದು. ತಕ್ಷಣದಿಂದಲೇ ಫಾರ್ಮ್ ತೆರವುಗೊಳಿಸಬೇಕು ಎಂದು ಸೂಚಿಸಿದರು. ಬಳಿಕ ಫಾಮ್ರ್ ಮಾಲೀಕ ಗೋಡೆ ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ನಗರಸಭೆ ಮಾಜಿ ಸದಸ್ಯ ಈರಣ್ಣ ಮಾಕನೂರ, ಸುರೇಶ ಹಿರೇಕೆರೂರ, ವಿಕ್ರಮ್ ಕುಂದಾಪುರ, ವೀರಮ್ಮ ಸಾಳೇರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts