More

    ಹಂದಿಗಳ ಹಾವಳಿಯಿಂದ ಬೆಳೆ ಹಾನಿ

    ನರೇಗಲ್ಲ: ಪಟ್ಟಣದ ಸುತ್ತಲಿನ ಜಮೀನುಗಳಿಗೆ ಹಂದಿಗಳು ಹಿಂಡು ಹಿಂಡಾಗಿ ದಾಳಿ ಮಾಡಿ ಗೋವಿನಜೋಳ ಬೆಳೆ ಹಾನಿ ಮಾಡಿವೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

    ಪಟ್ಟಣದ ಬುಲ್ಡೋಜರ್ ನಗರದ ಹತ್ತಿರದ ರೈತ ಅನಿಲ ಕಳಕಣ್ಣವರ ಅವರ ಹೊಲದಲ್ಲಿನ ಗೋವಿನಜೋಳ ಬೆಳೆಗೆ ನುಗ್ಗಿದ ಹಂದಿಗಳ ಹಿಂಡು ಸುಮಾರು ಅರ್ಧ ಎಕರೆ ಬೆಳೆ ಹಾನಿ ಮಾಡಿವೆ.

    ಪಟ್ಟಣದ ಗದಗ ರಸ್ತೆ, ಹಂಚಿನಾಳ ರಸ್ತೆ, ಜಕ್ಕಲಿ ರಸ್ತೆ, ಅಬ್ಬಿಗೇರಿ ರಸ್ತೆ, ಮಾರನಬಸರಿ ರಸ್ತೆ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆದು ನಿಂತಿರುವ ಹಾಗೂ ಕಟಾವಿಗೆ ಬಂದ ಗೋವಿನಜೋಳ ಬೆಳೆಗಳ ಹೊಲಗಳಿಗೆ ಹಂದಿಗಳು ಹಿಂಡು ಹಿಂಡಾಗಿ ನುಗ್ಗಿ ನಾಶಪಡಿಸುತ್ತಿವೆ. ಪಟ್ಟಣದ ಹೊರ ವಲಯದ ಹಿತ್ತಲಿನಲ್ಲಿ ಸಂಗ್ರಹಿಸಿಟ್ಟ ಹೊಟ್ಟು, ಮೇವಿನ ಬಣವೆಗಳಿಗೂ ಹಾನಿ ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.

    ನಮ್ಮ ಹೊಲಕ್ಕೆ ಹಂದಿಗಳ ಹಿಂಡು ದಾಳಿ ಮಾಡಿ ಸುಮಾರು ಅರ್ಧ ಎಕರೆಯಷ್ಟು ಗೋವಿನಜೋಳ ಬೆಳೆಯನ್ನು ಹಾನಿ ಮಾಡಿವೆ. ಹಂದಿಗಳ ಉಪಟಳದ ಬಗ್ಗೆ ಸಾಕಷ್ಟು ಬಾರಿ ಪಟ್ಟಣ ಪಂಚಾಯಿತಿ, ಹಂದಿಗಳ ಮಾಲೀಕರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇನ್ನಾದರೂ ಪಪಂ ಅಧಿಕಾರಿಗಳು ಹಂದಿಗಳನ್ನು ಹಿಡಿದು ದೂರ ಸಾಗಿಸಬೇಕು.

    | ಅನಿಲ ಕಳಕಣ್ಣವರ, ರೈತ

    ನರೇಗಲ್ಲ ಪಟ್ಟಣದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾದ ಕಾರಣ ಇತ್ತೀಚೆಗೆ ಹಂದಿ ಸಾಕಾಣಿಕೆದಾರರಿಗೆ ನೋಟಿಸ್ ನೀಡಲಾಗಿದೆ. ಇನ್ನೊಮ್ಮೆ ಅವರನ್ನು ಕರೆಯಿಸಿ ಎಚ್ಚರಿಕೆ ನೀಡಿ, ಹಂದಿಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ.

    | ಎಂ.ಎ. ನೂರೂಲ್ಲಾಖಾನ, ನರೇಗಲ್ಲ ಪಪಂ ಪ್ರಭಾರಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts