More

    ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿ

    ಹುಕ್ಕೇರಿ, ಬೆಳಗಾವಿ: ರೈತರ ಜೀವನಾಡಿ ಹಾಗೂ ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ. ರಾಸುಗಳಿಗೆ ವಿಮೆ ಮಾಡಿಸಿದಲ್ಲಿ ಹೈನುಗಾರಿಕೆಗೆ ಯಾವ ಭಯ ಇರುವುದಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಂಗಳವಾರ ಬೆಳಗಾವಿ ಹಾಲು ಒಕ್ಕೂಟದ ಆಶ್ರಯದಲ್ಲಿ ರಾಸು ವಿಮೆ ಚೆಕ್ ವಿತರಿಸಿ ಮಾತನಾಡಿದ ಅವರು, ಒಕ್ಕೂಟ ಅನುದಾನದಡಿ ರಾಸುಗಳ ವಿಮಾ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಯೋಜನೆಯಡಿ ಆಯ್ಕೆಯಾದ ತಾಲೂಕಿನ 3 ಜನ ರೈತರಿಗೆ ತಲಾ 50 ಸಾವಿರ ರೂ. ಹಾಗೂ ರೈತರ ಕಲ್ಯಾಣ ಸಂಘದಿಂದ ಇಬ್ಬರು ಫಲಾನುಭವಿಗಳಿಗೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 1.70 ಲಕ್ಷ ರೂ. ರೂ. ಚೆಕ್ ನೀಡಲಾಗಿದೆ ಎಂದರು. ರೈತರು ಜಾನುವಾರುಗಳಿಗೆ ವಿಮೆ ಮಾಡಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ರಾಯಪ್ಪ ಡೂಗ ಮಾತನಾಡಿ, ಒಕ್ಕೂಟದ ಅಧಿಕಾರಿಗಳು ಹಾಗೂ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರು ರೈತರಿಗೆ ವಿಮಾ ಯೋಜನೆಯ ಲಾಭ ತಿಳಿಸಬೇಕು. ಆಗ ಮಾತ್ರ ಜಾನುವಾರು ವಿಮೆ ಯಶಸ್ವಿಯಾಗುತ್ತದೆ ಎಂದರು.

    ಬೆಮುಲ್ ಸಹಾಯಕ ವ್ಯವಸ್ಥಾಪಕ ಡಾ.ಚಂದ್ರಶೇಖರ ಸಂಬಾಳ, ವಿಸ್ತೀರ್ಣಾಧಿಕಾರಿ ಮಂಜುನಾಥ ಹಗೇದಾಳ, ರೈತರಾದ ಆನಂದ ಮುನ್ನೋಳಿ, ಮನೋಹರ ಕರಿಗಾರ, ಮಿಥುನ ಕತ್ತಿ, ಬಸಪ್ಪ ಬಾನಿ, ಸುಖದೇವ ದೇಸಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts