More

    ಸ್ವರ್ಣವಲ್ಲೀ ಮಹಾ ಸಂಸ್ಥಾನದ ವಿದ್ಯಾಭವನ ಲೋಕಾರ್ಪಣೆ ನಾಳೆ

    ಶಿರಸಿ: ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಪರಿಸರ ಸೇರಿ ಹಲವು ಕಾರಣಕ್ಕೆ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನೂತನ ವಿದ್ಯಾಭವನ ಲೋಕಾರ್ಪಣೆಗೆ ಸಜ್ಜಾಗಿದ್ದು, ಮಾರ್ಚ್ 1ರಂದು ಮಠಕ್ಕೆ ಸಮರ್ಪಣೆಗೊಳ್ಳಲಿದೆ.

    ನಾಲ್ಕುವರೆ ಕೋಟಿ ರೂಪಾಯಿ ಮೊತ್ತದಲ್ಲಿ ಶಿಷ್ಯರು, ದಾನಿಗಳು, ಸರ್ಕಾರದ ಸಹಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಮಠದ ಅಂಗ ಸಂಸ್ಥೆಯಾದ ಶ್ರೀರಾಜರಾಜೇಶ್ವರಿ ವಿದ್ಯಾ ಸಂಸ್ಥೆಯು ಸಂಸ್ಕೃತ ಮಹಾ ವಿದ್ಯಾಲಯಗಳು ಜತೆಗೆ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿಯೂ ಚಟುವಟಿಕೆ ನಡೆಸುತ್ತಿದೆ. ಇದಕ್ಕೆ ಅನುಕೂಲ ಆಗುವಂತೆ ಮಠದಲ್ಲಿ ನೂತನ ಕಟ್ಟಡ ನಿರ್ವಣಕ್ಕೆ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಸಹಕಾರದಲ್ಲಿ ಸಂಕಲ್ಪಿಸಲಾಗಿತ್ತು. 4.5 ಕೋಟಿ ರೂಪಾಯಿ ಮೊತ್ತದಲ್ಲಿ ವಿದ್ಯಾ ಭವನ ನಿರ್ಮಾಣ ಮಾಡಲು 2018ರಲ್ಲಿ ಯೋಜಿಸಲಾಗಿದ್ದ ವಿದ್ಯಾಭವನ ಮೂರು ವರ್ಷದಲ್ಲಿ ಪೂರ್ಣವಾಗಿದೆ. ನೂತನ ವಿದ್ಯಾಭವನದಲ್ಲಿ ಮೂರು ಅಂತಸ್ತಿದ್ದು, 20 ಸಾವಿರ ಚದರಡಿ ಇರುವ ಭವನದಲ್ಲಿ ಒಂದು ಉಗ್ರಾಣ ಸಹಿತ 23ಕ್ಕೂ ಅಧಿಕ ಕೊಠಡಿಗಳಿವೆ. ಇವುಗಳಲ್ಲಿ 15 ಕೊಠಡಿಗಳು ವಿದ್ಯಾರ್ಥಿಗಳಿಗೆ ಬೋಧನಾ ಕೊಠಡಿಗಳಾಗಿವೆ. ಉಳಿದವು ಕಾರ್ಯಾಲಯ, ಕಂಪ್ಯೂಟರ್ ಕೊಠಡಿ, ಬೋರ್ಡ್ ರೂಮ್ ಅತಿಥಿ ಗೃಹಗಳಿವೆ. ಕಟ್ಟಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸುಸಂಸ್ಕೃತ ಬದುಕಿಗಾಗಿ ವಿದ್ಯಾರ್ಜನೆ ಮಾಡಲಿದ್ದಾರೆ.

    ಶತ ಶತಮಾನಗಳ ಇತಿಹಾಸ, ಪರಂಪರೆ ಹೊಂದಿದ ಶಂಕರಾಚಾರ್ಯ ಪೀಠದ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಕೃತ ಹಾಗೂ ಸಂಸ್ಕೃತಿ ಕಲಿಕೆಗೆ ವಿದ್ಯಾಭವನ ಪೂರಕವಾಗಲಿದೆ. ಈ ಕಟ್ಟಡವು ಸಂಸ್ಥಾನಕ್ಕೆ ಕಳಶಪ್ರಾಯವಾಗಿದೆ. | ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವಣವಲ್ಲೀ ಮಠ

    ಶ್ರೀಗಳ ಪೀಠಾರೋಹಣ ತ್ರಿದಶಮಾನೋತ್ಸವದ ಕ್ಷಣದಲ್ಲಿ ಅಭಿವೃದ್ಧಿಗೊಂಡ ವಿದ್ಯಾ ಭವನದ ಸಮರ್ಪಣೆಯ ಕಾರ್ಯ ಅತ್ಯಂತ ಸಂತಸದ ಕ್ಷಣ. ಈ ಸಮಾರಂಭದಲ್ಲಿ ಶಿಷ್ಯರೆಲ್ಲ ಪಾಲ್ಗೊಂಡು ಸಾಕ್ಷೀಕರಿಸಬೇಕು ಎಂಬುದು ನಮ್ಮ ಅಪೇಕ್ಷೆ. | ವಿ.ಎನ್.ಹೆಗಡೆ ಬೊಮ್ಮನಳ್ಳಿ ಆಡಳಿತ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts