More

    ಸ್ವದೇಶಕ್ಕೆ ತೆರಳಲು ವಿದೇಶಿಯರ ಹಿಂದೇಟು

    ವಿಜಯವಾಣಿ ಸುದ್ದಿಜಾಲ ಗೋಕರ್ಣ: ಇಲ್ಲಿನ ವಿವಿಧ ಬೀಚ್ ಹಾಗೂ ವಸತಿ ಗೃಹಗಳಲ್ಲಿರುವ ಹೆಚ್ಚಿನ ವಿದೇಶಿ ಪ್ರವಾಸಿಗರು ತಮ್ಮ ಸ್ವದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ.

    ವಿಶೇಷವಾಗಿ ಯುರೋಪಿನ ಇಟಲಿ, ಜರ್ಮನಿ, ಯುಕೆ ಮುಂತಾದ ದೇಶಗಳಲ್ಲಿ ಕರೊನಾ ಭಯ ತೀವ್ರವಾಗಿರುವ ಕಾರಣ ಅಲ್ಲಿನ ಅನೇಕರು ಗೋಕರ್ಣದಲ್ಲಿಯೇ ಕೆಲ ತಿಂಗಳು ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರ ವೀಸಾ ಅವಧಿ ಒಂದೆರಡು ವಾರಗಳಲ್ಲಿ ಕೊನೆಯಾಗುತ್ತಿದ್ದು ಅವರು ವೀಸಾ ಮುಂದುವರಿಸಲು ಆರೋಗ್ಯ ಇಲಾಖೆಯ ಸಹಾಯಕ್ಕಾಗಿ ವೈದ್ಯಾಧಿಕಾರಿಗಳನ್ನು ಸಂರ್ಪಸುತ್ತಿದ್ದಾರೆ.

    ಗೋಕರ್ಣವೇ ಸೇಫ್: ಪೊಲೀಸ್ ಇಲಾಖೆ ದಾಖಲೆ ಪ್ರಕಾರ ಮಹಾಶಿವರಾತ್ರಿ ನಂತರ ಇಲ್ಲಿ ತಂಗಿದ್ದ ಅರ್ಧಕ್ಕಿಂತ ಹೆಚ್ಚಿನ ವಿದೇಶಿಯರು ತಮ್ಮ ತಮ್ಮ ದೇಶಗಳಿಗೆ ತಿರುಗಿ ಹೋಗಿದ್ದಾರೆ. ಸದ್ಯ ಗೋಕರ್ಣದಲ್ಲಿ 300ರಿಂದ 400 ವಿದೇಶಿಯರು ಮಾತ್ರ ವಾಸಿಸುತ್ತಿದ್ದಾರೆ. ಇವರೆಲ್ಲ ಕರೊನಾ

    ವೈರಸ್​ಗೆ ಸಂಬಂಧಿಸಿದಂತೆ ತಮ್ಮ ದೇಶಕ್ಕಿಂತ ಇಂಡಿಯಾವೇ ಹೆಚ್ಚು ಸೇಫ್ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಟಲಿಯಲ್ಲಿ ಕರೊನಾ ಭೀತಿ ತೀವ್ರವಾಗಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಬೇರೆ ದೇಶಗಳ ಪ್ರವಾಸ ಮುಗಿಸಿ ಮರಳಿ ಇಟಲಿ ಪ್ರವೇಶಿಸುವ ಸ್ವದೇಶೀಯರನ್ನು ತೀವ್ರ ತಪಾಸಣೆಗೆ ಒಳ ಪಡಿಸಿ ಕೆಲ ದಿನ ಪ್ರತ್ಯೇಕವಾಗಿ ಇಡಲಾಗುತ್ತಿರುವುದು ಕೂಡ ಇಲ್ಲಿರುವವರನ್ನು ಚಿಂತೆಗೀಡಾಗಿಸಿದೆ. ಆರೋಗ್ಯ ಇಲಾಖೆ ವತಿಯಿಂದ ಇಲ್ಲಿರುವ ಗರಿಷ್ಠ ವಿದೇಶಿಯರನ್ನು ಸಮಗ್ರವಾಗಿ ತಪಾಸಣೆ ಮಾಡಲಾಗಿದೆ.ಸೋಮವಾರದಿಂದ ಬುಧವಾರದ ವರೆಗೆ ಒಟ್ಟು 112 ವಿದೇಶಿಯರನ್ನು ತಪಾಸಿಸಲಾಗಿದೆ.

    ಈವರೆಗೆ ಕಳೆದೊಂದು ವಾರದಲ್ಲಿ ಆರೋಗ್ಯ ಇಲಾಖೆ ಒಟ್ಟು 912 ವಿದೇಶಿಯರನ್ನು ಪರೀಕ್ಷಿಸಿದ್ದು ಅವರಲ್ಲಿ ಯಾವುದೇ ಬಗೆಯ ಕರೊನಾ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖೆ ದೃಢ ಪಡಿಸಿದೆ. ಆರೋಗ್ಯ ಇಲಾಖೆ ಇಂತಹ ದೃಢೀಕರಣ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಕರೊನಾ ಲಕ್ಷಣಗಳಿಲ್ಲ ಎಂಬ ದೃಢೀಕರಣ ಪ್ರತಿಯನ್ನು ತಾವೂ ಪಡೆದುಕೊಂಡು ಆಮೂಲಕ ದೇಶಕ್ಕೆ ಹೋಗಲು ಕೆಲ ವಿದೇಶಿಯರು ವಿಫಲ ಯತ್ನ ಮಾಡುತ್ತಿದ್ದಾರೆ.

    ಅನೇಕ ವಿದೇಶಿಯರು ತಮ್ಮ ವೀಸಾ ಮುಂದುವರಿಸಲು ಪ್ರಯತ್ನ ಮಾಡುತ್ತಿದ್ದು ಆ ಬಗ್ಗೆ ಆರೋಗ್ಯ ಇಲಾಖೆಯನ್ನು ಸಂರ್ಪಸಿದ್ದಾರೆ. ಅಂತಹವರಿಗೆ ಪೊಲೀಸ್ ಇಲಾಖೆ ಮೂಲಕ ಸಂಬಂಧಿಸಿದ ರಾಯಭಾರಿ ಕಚೇರಿ ಸಂರ್ಪಸಲು ಸಲಹೆ ನೀಡಲಾಗಿದೆ. | ಡಾ.ಜಗದೀಶ ನಾಯ್ಕ ಆರೋಗ್ಯಾಧಿಕಾರಿಗಳು ಗೋಕರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts