More

    ಸ್ವಚ್ಛ ಗ್ರಾಮಕ್ಕೆ ಜನರ ಸಹಕಾರ ಅಗತ್ಯ

    ಆನಂದಪುರ: ಸಂಪೂರ್ಣ ಸ್ವಚ್ಛ ಗ್ರಾಮವನ್ನಾಗಿಸಲು ಕೇವಲ ಗ್ರಾಪಂ ಆಡಳಿತದಿಂದ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಜಿಪಂ ಸದಸ್ಯೆ ಅನಿತಾಕುಮಾರಿ ತಿಳಿಸಿದರು.

    ಇಲ್ಲಿನ ಬಸ್ ನಿಲ್ದಾಣ ಆವರಣದಲ್ಲಿ ಶುಕ್ರವಾರ ಗ್ರಾಪಂ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಗ್ರಾಮವೆಂದು ಹೇಳಿಕೊಳ್ಳಲು ಎಲ್ಲರೂ ಹೆಮ್ಮೆ ಪಡಬೇಕು. ಇದರಿಂದ ಆ ಗ್ರಾಮಗಳಿಗೆ ಸಾರ್ವತ್ರಿಕ ಗೌರವ ದೊರೆಯುತ್ತದೆ ಎಂದರು.

    ಸಾಗರ ತಾಪಂ ಸದಸ್ಯೆ ಜ್ಯೋತಿ ಕೋವಿ ಮಾತನಾಡಿ, ಸ್ವಚ್ಛತಾ ತತ್ವ ಪಾಲನೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಬದುಕಿನುದ್ದಕ್ಕೂ ಪ್ರತಿಯೊಬ್ಬರೂ ಸ್ವಚ್ಛ ಗ್ರಾಮಕ್ಕೆ ಪೂರಕವಾಗಿ ವರ್ತಿಸಬೇಕೆಂದರು.

    ಗ್ರಾಪಂ ಪಿಡಿಒ ಇಂದಿರಾಜ್ಯೋತಿ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಹಸಿ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು. ಇದಕ್ಕಾಗಿ ಮಲಂದೂರು ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ಒಟ್ಟು 12.5 ಲಕ್ಷ ರೂ. ವೆಚ್ಚದ ಯೋಜನೆ ಅನುಷ್ಠಾನವಾಗುತ್ತದೆ ಎಂದು ಹೇಳಿದರು.

    ಸಾಗರ ತಾಪಂ ಸದಸ್ಯೆ ಆನಂದಿ ಲಿಂಗರಾಜ್, ಆಡಳಿತಾಧಿಕಾರಿ ಕೆ.ಬಿ.ಪ್ರಸನ್ನ, ಗ್ರಾಪಂ ಮಾಜಿ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts