More

    ಸ್ವಚ್ಛತೆಗೆ ಆದ್ಯತೆ ನೀಡಿ

    ಹೊಳೆನರಸೀಪುರ: ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ಶುದ್ಧವಾಗಿರಬೇಕು. ವಾಸಿಸುವ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಾಂಕ್ರಮಿಕ ರೋಗಗಳಿಂದ ರಕ್ಷಣೆ ಪಡೆಯಬೇಕು ಎಂದು ಆರೋಗ್ಯ ನಿರೀಕ್ಷಕ ಜೆ.ಟಿ.ಸ್ವಾಮಿ ಸಲಹೆ ನೀಡಿದರು.

    ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡೆಂಘೆ ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ಮಾತನಾಡಿದ ಅವರು, ಡೆಂಘೆ, ಮಲೇರಿಯಾ, ಮಿದುಳು ಜ್ವರ, ಆನೆಕಾಲು ರೋಗ, ಚಿಕೂನ್ ಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡಲಿದ್ದು, ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಚಿಕಿತ್ಸೆ ಪಡೆಯಬೇಕು. ಜತೆಗೆ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲನೆ ಮಾಡಿದರೆ ಸಾಂಕ್ರಮಿಕ ರೋಗದಿಂದ ಮುಕ್ತರಾಗಬಹುದು ಎಂದರು.

    ಪಟ್ಟಣದ ಚೌಡೇಶ್ವರಿ ದೇವಾಲಯ ರಸ್ತೆ, ಮೇದರ ಬೀದಿ, ಹೌಸಿಂಗ್ ಬೋರ್ಡ್, ಆಯತ್ ನಗರ, ಆಶ್ರಯ ಬಡಾವಣೆ ಸೇರಿದಂತೆ ಇತರ ಬಡಾವಣೆಗಳಲ್ಲಿ ಕೈಗೊಂಡ ಡೆಂಘೆ ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ಆರೋಗ್ಯ ನಿರೀಕ್ಷಕರಾದ ಕೃಷ್ಣ, ಸೋಮಶೇಖರ್, ಶುಶ್ರೂಷಕರಾದ ಕೃಷ್ಣಭಾರತಿ, ಪುಷ್ಪಾ, ಪಾರ್ವತಮ್ಮ, ಜ್ಯೋತಿ, ಆಶಾ, ಯಶೋದಾ, ಸುಜಾತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts