More

    ಸ್ವಚ್ಛತಾ ಶ್ರಮಕ್ಕೆ ಬೆಲೆಕಟ್ಟಲಾಗದು

    ನರೇಗಲ್ಲ: ಪಟ್ಟಣವನ್ನು ಸ್ವಚ್ಛವಾಗಿಡುವ ಪೌರ ಕಾರ್ವಿುಕರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಪಪಂ ಮಹೇಶ ನಿಡಸೇಶಿ ಹೇಳಿದರು.

    ಪಪಂನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೌರ ಕಾರ್ವಿುಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸ್ವಚ್ಛತೆ ಕಾರ್ಯಕ್ಕೆ ತೆರಳುವಾಗ ಮೈ ಮುಚ್ಚುವ ಕವಚ, ಬೂಟ್ ಕಡ್ಡಾಯವಾಗಿ ಧರಿಸಬೇಕು. ಕೆಲಸ ಮಾಡುವಾಗ ತಿಂಡಿ, ತಿನಿಸು ಸೇವಿಸಬಾರದು. ಕರ್ತವ್ಯ ಮುಗಿದ ಮೇಲೆ ಕೈ, ಕಾಲುಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಪೌರ ಸೇವಾ ಸಂಘದ ನೌಕರರ ಸಂಘದ ಅಧ್ಯಕ್ಷ ಎಸ್.ಎ. ಜಕ್ಕಲಿ ಮಾತನಾಡಿ, ಕಾರ್ವಿುಕರು ದುಶ್ಚಟ ಬಿಡಬೇಕು. ನಿಗದಿತ ಸಮಯಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು ಎಂದರು.

    30 ಪೌರ ಕಾರ್ವಿುಕರು ಹಾಗೂ ಪಪಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

    ಪಪಂ ಸದಸ್ಯ ಶ್ರೀಶೈಲಪ್ಪ ಬಂಡಿವಾಳ, ಮೌನೇಶ ಹೊಸಮನಿ, ಆರೋಗ್ಯ ಕಿರಿಯ ನಿರೀಕ್ಷಕ ರಾಮಚಂದ್ರ ಕಜ್ಜಿ, ಮಾರುತಿ ದೊಡ್ಡಮನಿ, ಆರೀಫ್ ಮಿರ್ಜಾ, ರಮೇಶ ಹಲಗಿ, ಎಸ್.ಎಫ್. ದೊಡ್ಡಮನಿ, ನೀಲಪ್ಪ ಚಳ್ಳಮರದ, ಮಾದೇವಪ್ಪ ಮ್ಯಾಗೇರಿ, ಹನುಮಂತ ಕಣಗಿನಾಳ, ಮಂಜುನಾಥ ಕಮ್ಮಲಾಪುರ, ಮಲ್ಲಯ್ಯ ಆರಾಧ್ಯಮಠ, ಸಂಜೀವ ಎಸ್, ಶಂಕ್ರಪ್ಪ ದೊಡ್ಡಣ್ಣವರ, ಆಶೋಕ ಹೊಸಳ್ಳಿ, ಶರಣಪ್ಪ ಮ್ಯಾಗೇರಿ, ಪಾಡುರಂಗ ರಾಂಪುರ, ಲಕ್ಷ್ಮ ಎಸ್. ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts