More

    ಸ್ಮಾರಕ ಭವನ ನಿರ್ವಣಕ್ಕೆ ಕ್ರಮ

    ಧಾರವಾಡ: ಧಾರವಾಡ ಸಂಗೀತ, ಸಾಹಿತ್ಯ ಮತ್ತು ಕಲೆಯ ತವರೂರು. ಸಂಗೀತ ಪರಂಪರೆಯ ಮುಂದುವರಿಕೆಗೆ ಜಿಲ್ಲಾಡಳಿತ ಪೊ›ೕತ್ಸಾಹ ನೀಡುತ್ತಿದೆ. ಸ್ವರಸಾಮ್ರಾಟ ಪಂಡಿತ ಬಸವರಾಜ ರಾಜಗುರು ಅವರ ಸ್ಮಾರಕ ಭವನ ನಿರ್ಮಾಣ ಹಾಗೂ ಅನುದಾನ ಬಿಡುಗಡೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್​ನಿಂದ ಸೋಮವಾರ ಆಯೋಜಿಸಿದ್ದ ಪಂ. ಬಸವರಾಜ ರಾಜಗುರು ಅವರ 100ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪಂ. ಬಸವರಾಜ ರಾಜಗುರು ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ರಾಜಗುರು ಅವರ 100ನೇ ಜನ್ಮದಿನವನ್ನು ಸಂಗೀತ ಉತ್ಸವದೊಂದಿಗೆ ಆಚರಿಸಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಸ್ಮಾರಕಭವನ ನಿರ್ವಣದ ಮೂಲಕ ರಾಜಗುರು ಅವರ ಸಂಗೀತ ಪರಂಪರೆಯನ್ನು ನಿರಂತರವಾಗಿ ಸಂಘಟಿಸಲಾಗುವುದು ಎಂದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಸಂತೋಷ ಬಿರಾದಾರ, ಟ್ರಸ್ಟ್ ಸದಸ್ಯರಾದ ಭಾರತಿದೇವಿ ರಾಜಗುರು, ಡಾ. ಜಿ.ಎಂ. ಹೆಗಡೆ, ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ವೈ.ಬಿ. ನಂದಿ, ಇತರರಿದ್ದರು. ಟ್ರಸ್ಟ್ ಸದಸ್ಯ ನಿಜಗುಣಿ ರಾಜಗುರು ನಿರ್ವಹಿಸಿದರು. ವಿಶ್ವರಾಜ ರಾಜಗುರು ವಚನಗಾಯನ ಪ್ರಸ್ತುತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts