More

    ಸ್ಮಶಾನಕ್ಕೆ ತೆರಳಲು ದಾರಿ ಕಲ್ಪಿಸಲು ಒತ್ತಾಯ

    ನವಲಗುಂದ: ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದೇ ತೊಂದರೆ ಅನುಭವಿಸುತ್ತಿರುವ ತಾಲೂಕಿನ ಸೊಟಕನಾಳ ಗ್ರಾಮಸ್ಥರು ಸೂಕ್ತ ದಾರಿ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.

    ಸೊಟಕನಾಳ ಗ್ರಾಮದ ಮುಖಂಡ ಚನ್ನಪ್ಪ ಹಾಲವಾರ ಮಾತನಾಡಿ, ಸೊಟಕನಾಳದಲ್ಲಿ 1997ರಲ್ಲಿ ಅಂದಿನ ತಹಸೀಲ್ದಾರ್​ರು ರಿಸನಂ 2ರಲ್ಲಿ 20 ಗುಂಟೆ ಜಾಗವನ್ನು ಸ್ಮಶಾನಕ್ಕೆ ನೀಡಿದ್ದರು. ಆದರೆ, ಸ್ಮಶಾನಕ್ಕೆ ತೆರಳಲು ಜಾಗ ಇಲ್ಲದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತ ಬಂದಿದ್ದಾರೆ. ಕಳೆದ 23 ವರ್ಷಗಳಿಂದ ಗ್ರಾಮಸ್ಥರು ಸ್ಮಶಾನಕ್ಕಾಗಿ ದಾರಿ ಕಲ್ಪಿಸುವಂತೆ ಆಗ್ರಹಿಸಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಮೌಖಿಕ ಮತ್ತು ಲಿಖಿತವಾಗಿ ಮನವಿಯನ್ನೂ ಸಲ್ಲಿಸಿ ರೋಸಿ ಹೋಗಿದ್ದಾರೆ. ಈ ಕುರಿತಂತೆ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಈವರೆಗೆ ಯಾವುದೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

    ಸದ್ಯ ಸ್ಮಶಾನದ ಬಳಿ 25 ಗುಂಟೆ ಖರಾಬು ಜಾಗವಿದ್ದು, ಅದನ್ನು ತೆಗೆದುಕೊಂಡು ಸ್ಮಶಾನಕ್ಕೆ ಹೋಗಿ ಬರಲು ಹಾದಿಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.

    ಈ ವೇಳೆ ಪೋನ್​ನಲ್ಲಿ ಧರಣಿನಿರತರೊಂದಿಗೆ ಮಾತನಾಡಿದ ತಹಸೀಲ್ದಾರ್ ನವೀನ ಹುಲ್ಲೂರ, ಸ್ಥಳ ಪರಿಶೀಲಿಸಿ, ಜಾಗದ ನಕಾಶೆ ತೆಗೆದು ದಾರಿ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಬಳಿಕ ಗ್ರೇಡ್-2 ತಹಸೀಲ್ದಾರ್ ಎಂ.ಜೆ. ಹೊಕ್ರಾಣಿಯವರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಎನ್.ಎಸ್. ಬೆಳವಟಗಿ, ವೈ.ಎಸ್. ಆನಂದಿ, ದೇವಪ್ಪ ಆನಂದಿ, ಬೀರಪ್ಪ ಪೂಜಾರ, ನಾಗಪ್ಪ ಮಾದರ, ರಾಮಣ್ಣ ಮಾದರ, ಶಿವಪ್ಪ ಆನಂದಿ, ಯಲ್ಲಪ್ಪ ಬೆಳವಣಕಿ, ವೈ.ಎಚ್. ಮೂಲಿಮನಿ, ಆರ್.ಎಚ್. ಬೆಳವಣಕಿ, ವೀರಪ್ಪ ಆನಂದಿ, ಬಸಪ್ಪ ಆನಂದಿ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts