More

    ಸ್ಪಷ್ಟನೆ ಕೇಳಿದ ಸರ್ವೆ ಆಫ್ ಇಂಡಿಯಾ

    ಕಾರವಾರ: ಹೊನ್ನಾವರದ ಕಾಸರಕೋಡಿನಲ್ಲಿ ಕರಾವಳಿ ನಿಯಂತ್ರಣ ವಲಯ ನಕ್ಷೆಯನ್ನು ಬದಲಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸರ್ವೆ ಆಫ್ ಇಂಡಿಯಾ ಜಿಲ್ಲಾಡಳಿತಕ್ಕೆ ಸ್ಪಷ್ಟನೆ ಕೋರಿದೆ.

    2018 ರಲ್ಲಿ ಒಪ್ಪಿಗೆ ಪಡೆದ ಕರಾವಳಿ ವಲಯ ನಿರ್ವಹಣಾ ನಕ್ಷೆ (ಸಿಝುಡ್​ಎಂಪಿ)ಯಲ್ಲಿ ಹೊನ್ನಾವರದ ಪಾವಿನಕುರ್ವಾ, ಮಲ್ಲುಕುರ್ವಾ ಗ್ರಾಮದ 305 ಸರ್ವೆ ನಂಬರ್ ಎಲ್ಲಿಯೂ ಇಲ್ಲ. ಆದರೆ, ಜಿಲ್ಲಾಡಳಿತವು ರ್ಕ ಗ್ರಾಮದ ನಕ್ಷೆಯ ಮೇಲೆಯೇ ಹೊಸ ಸರ್ವೆ ನಂಬರ್ ಒಂದನ್ನು ಸೃಷ್ಟಿಸಿ ಹೇರಿದೆ. ನದಿ ಹರಿವಿನ ಪ್ರದೇಶ ಬದಲಾಗಿದ್ದರಿಂದ ಉಂಟಾದ ಪ್ರದೇಶವನ್ನು ತನ್ನದೇ ಎಂದು ಹೇಳುವ ಮೂಲಕ ಮೂಲ ನಕ್ಷೆಯನ್ನೇ ಬದಲಿಸಲು ಹೊರಟಿದೆ. 44 ಹೆಕ್ಟೇರ್ ಪ್ರದೇಶವಿರುವ ಜಾಗದಲ್ಲಿ ಸರ್ವೆ ನಂಬರ್ 305 ನ್ನು ರಚಿಸಿ ಆ ಜಾಗವನ್ನು ಖಾಸಗಿ ಕಂಪನಿಗೆ ಪರಬಾರೆ ಮಾಡಲು ಹೊರಟಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಪ್ರಕಾಶ ಮೇಸ್ತ ಸರ್ವೆ ಆಫ್ ಇಂಡಿಯಾಕ್ಕೆ ಇ-ಮೇಲ್ ಮೂಲಕ ದೂರು ನೀಡಿದ್ದರು.

    ಅಂಗೀಕೃತ ನಕ್ಷೆಯನ್ನು ಯಾವುದೇ ಅನುಮತಿ ಇಲ್ಲದೇ ಬದಲಿಸುವುದರಿಂದ ಮುಂದೆ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಗಡಿ ಸಮಸ್ಯೆ ಉದ್ಭವವಾಗಬಹುದು. ಹಡಗುಗಳ ಓಡಾಟದ ಮಾರ್ಗ ಬದಲಾಗಿ ತೊಂದರೆಯಾಗಬಹುದು ಎಂದು ಅವರು ಎಚ್ಚರಿಸಿದ್ದರು.

    ಭಾರತ ಮಹಾ ಸರ್ವೆಕ್ಷಕರ ಕಾರ್ಯಾಯಲದ ನಿರ್ದೇಶಕ ಕರ್ನಲ್ ವಿವೇಕ ಮಲ್ಲಿಕ್ ಫೆ.11 ರಂದು ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಹೊನ್ನಾವರದಲ್ಲಿ ವಾಣಿಜ್ಯ ಬಂದರು ನಿರ್ವಣಕ್ಕೆ ಖಾಸಗಿ ಕಂಪನಿಗೆ ಅನುಮತಿ ನೀಡಲಾಗಿದೆ. ಆದರೆ, ಸ್ಥಳೀಯ ಮೀನುಗಾರರು ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts