More

    ಸ್ಥಿರತೆ ಸಾಧನೆಯ ಯಶಸ್ಸಿಗೆ ದಾರಿ

    ಚಿತ್ರದುರ್ಗ: ಯಾವುದೇ ಕೆಲಸ,ಯಾವುದೇ ಹುದ್ದೆ ಇದ್ದರೂ ನಮ್ಮಲ್ಲಿ ಸ್ಥಿರತೆ ಇರಬೇಕೆಂದು ಸುರತ್ಕಲ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್‌ಟೆಕ್ನಾಲಜಿ ಕಂಪ್ಯೂಟರ್‌ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮೋಹಿತ್ ಪಿ.ತಹಿಲಿಯಾನಿ ಹೇಳಿದರು.
    ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ,ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಿಂದ 2022-23ನೇ ಸಾಲಿನ ಪದವೀಧರರಿಗೆ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಥಿರತೆ ನಮ್ಮ ಯಶಸ್ಸಿಗೆ ದಾರಿ. ವಿದ್ಯಾರ್ಥಿದೆ ಸೆಯಿಂದಲೇ ಸ್ಥಿರತೆ ಬೆಳಸಿಕೊಳ್ಳಬೇಕು.ನಿರಂತರ ಶ್ರಮ,ಸ್ಥಿರತೆ ಕಾಪಾಡಿಕೊಂಡಿದ್ದರಿಂದಾಗಿ ಅನೇಕ ಮಹನೀಯರು ತಮ್ಮ ಕ್ಷೇತ್ರಗಳಲ್ಲಿ ಬ ಹು ದೊಡ್ಡ ಸಾಧನೆ ಮಾಡಿದ್ದಾರೆ.
    ನಮ್ಮ ಕೆಲಸದ ಬಗ್ಗೆ ಯೋಜನೆ ಜತೆಗೆ ಪೂರ್ವ ಸಿದ್ಧತೆಯಿರಬೇಕು. ಪೂರ್ವ ಸಿದ್ಧತೆ ಉತ್ತಮ ಫಲ ನೀಡುತ್ತದೆ. ಕಲಿತ ಬಳಿಕ ಮಾನ ವೀಯ ನೆಲೆಯಲ್ಲಿ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂದು ಅವರು, ತಾವು ಈ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಎಂದು ಹೇಳ ಲು ಹೆಮ್ಮೆ ಪಡುವುದಾಗಿ ಹೇಳಿದರು.
    ಸಾನ್ನಿಧ್ಯ ವಹಿಸಿದ್ದ ಶ್ರೀ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ನೊಂದವರೆಗೆ ನೆರವು ನೀಡಿದರೆ ನಮ್ಮ ಬದುಕು ಸುಂದರವಾಗುತ್ತದೆ. ನಮ್ಮ ಸಂಪಾದನೆ ನಾಲ್ಕು ಜನರಿಗೆ ಉಪಯೋಗವಾಗಬೇಕು. ಅನ್ಯರಿಗೆ ನೆರವಾದ ಕಲಿತ ವಿದ್ಯೆ, ಪಡೆದ ಪದವಿ ಸಾರ್ಥಕವಾಗುತ್ತದೆ.
    ಸಂಪಾದನೆಯೊಂದೇ ಜೀವನದ ಮುಖ್ಯಗುರಿ ಆಗಬಾರದು. ಹೆಚ್ಚಿನ ಹಣ ಸಂಪಾದನೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ದು ರಾಸೆಗೆ ಪ್ರಚೋದಿಸುತ್ತದೆ. ಪಾಲಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಕಲಿತ ಬಳಿಕ ಯಾವುದೇ ಸ್ಥಾನಮಾನ ಗಳಿಸಿದರೂ ಕಲಿಸಿದ ಗುರು,ಬೆಳೆಸಿದ ಪಾಲಕರನ್ನು ಮರೆಯಬಾರದು.
    ಶ್ರೀ ಜಗದ್ಗುರು ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸ್ಥಾಪಿಸಿದ್ದ ಎಸ್‌ಜೆಎಂಐಟಿ ಕಾಲೇಜುಕಳೆದ 43 ವರ್ಷ ಗಳಿಂದ ಸಾವಿರಾರು ವಿ ದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಮಾತನಾಡಿ, ತಂತ್ರ ಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದು ಆಂತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಕಾರಣ ಮಾನ ವೀಯ ಮೌಲ್ಯಗಳನ್ನು ಪಾಲಿಸುವವರು ಸಂಖ್ಯೆ ಕಡಿಮೆಯಾಗುತ್ತಿರುವುದು ಎಂದರು.
    ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎನ್.ಜಗನ್ನಾಥ್,ಡಾ.ಬಿ.ಜಿ.ಕುಮಾರಸ್ವಾಮಿ,ಕೆ.ಡಾ.ಸಿದ್ದೇಶ್, ಡಾ. ಎಚ್. ಜೆ.ಲೋಕೇಶ್,ಅಕಾಡೆಮಿಕ್ ಡೀನ್ ಡಾ.ಎ.ಎಂ.ರಾಜೇಶ್,ಡಾ.ಇ.ನಿರಂಜನ್,ಪ್ರೊ.ಎ.ಪಿ.ಶಶಿಧರ್ ಡಾ.ಕೆ.ಕುಮಾರ ಸ್ವಾಮಿ, ಜಿ.ಬಿ. ಸುನೀಲ್,ಪ್ರೊ.ಟಿ.ಬಿ.ಪ್ರೊ.ಲವಕುಮಾರ್ ಇದ್ದರು. ಪ್ರೊ.ಪೋರಾಳ್ ನಾಗರಾಜ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿ ದರು.
    ರಕ್ಷಿತಾ,ಆಕಾಂಕ್ಷಾ ಪ್ರಾರ್ಥಿಸಿ, ಪ್ರೊ.ಸುಷ್ಮಿತಾದೇಬ್ ನಿರೂಪಿಸಿ, ಪ್ರೊ.ಆರ್.ಮೊನಿಷಾ ವಂದಿಸಿದರು. ಜಮುರಾ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts