More

    ಸ್ಥಳೀಯ ಗಡ್ಡೆಗೆಣಸು ತಳಿಯ ರಕ್ಷಣೆ ಅಗತ್ಯ

    ಜೊಯಿಡಾ: ತಾಲೂಕಿನಲ್ಲಿ ಸಾವಯವ ರೀತಿಯಲ್ಲಿ ಬೆಳೆಯುತ್ತಿರುವ ಭತ್ತ ಮತ್ತು ಗಡ್ಡೆಗೆಣಸು ತಳಿಗಳ ಸಂರಕ್ಷಣೆ ಆಗಬೇಕಿದೆ ಎಂದು ಗೋವಾ ಜೀವ ವೈವಿಧ್ಯ ಮಂಡಳಿ ಸದಸ್ಯ ರಾಜೇಂದ್ರ ಕೇರಕರ ಹೇಳಿದರು.

    ಇಲ್ಲಿನ ಕುಣಬಿ ಭವನದಲ್ಲಿ ಬುಧವಾರ ಜೊಯಿಡಾ ಕುಣಬಿ ಸಮಾಜ ಅಭಿವೃದ್ಧಿ ಸಂಘ ಮತ್ತು ಗಡ್ಡೆಗೆಣಸು ಬೆಳೆಗಾರರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

    ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಮಾತನಾಡಿ, ಗಡ್ಡೆಗೆಣಸುಗಳ ಮೌಲ್ಯ ವರ್ಧನೆ, ಮಾರುಕಟ್ಟೆ ವ್ಯವಸ್ಥೆ ಬಗೆಗೆ ಇನ್ನಷ್ಟು ಚಿಂತನೆಯಾಗಬೇಕಿದೆ ಎಂದರು.

    ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಅಧಿಕಾರಿ ಎಸ್.ಎಚ್. ಚನ್ನವೀರಸ್ವಾಮಿ ಮಾತನಾಡಿದರು. ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಳದಲ್ಲಿ ಜೊಯಿಡಾ ಕುಣಬಿ ಮುಡ್ಲಿಯನ್ನು ಹೆಚ್ಚು ಬೆಳೆಯುತ್ತಿರುವ ರಾಮನಗರದ ಮಾದೇವ ಯಶವಂತ ಮಿರಾಶಿ ಮತ್ತು ವಿಷ್ಣು ಡೇರೆಕರ ಅವರನ್ನು ಸನ್ಮಾನಿಸಲಾಯಿತು.

    ಜಿ.ಪಂ. ಸದಸ್ಯ ರಮೇಶ ನಾಯ್ಕ, ಜೊಯಿಡಾ ಗ್ರಾ.ಪಂ. ಅಧ್ಯಕ್ಷೆ ಶೈಲಾ ನಾಯ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ, ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯದ ಅಮರೇಶ ಮುಂತಾದವರು ಉಪಸ್ಥಿತರಿದ್ದರು.

    54 ಬಗೆಯ ಗಡ್ಡೆ ಗೆಣಸು ಪ್ರದರ್ಶನ: ಮೇಳದಲ್ಲಿ ಸುಮಾರು 54 ಜಾತಿಯ ವಿವಿಧ ಗಡ್ಡೆ ಗೆಣಸುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಸ್ಥಳೀಯ ಕೆಸು, ಚಿರಕೆ, ಕೋನ, ಝಾಡಕಣಂಗ, ಮುಳ್ಳಿ, ದುಧಿ, ಹಳದ, ನಾಗರಕೋನ, ಬಿಳಿಗೆಣಸು, ಕಣಜ, ತಾಂಬುಸಕೊನ ಹೀಗೆ ಬೇರೆ ಜಾತಿಯ ಗಡ್ಡೆಗೆಣಸುಗಳು ಹಾಗೂ ಸ್ಥಳೀಯವಾಗಿ ತಯಾರಿಸಿದ ಹುಲ್ಲಿನ ಚಾಪೆ, ಮೊರ, ವಿವಿಧ ರೀತಿಯ ಚಿಪ್ಸ್, ನೆಲ್ಲಿಕಾಯಿ, ಹುಲ್ಲಿನ ಕಸ ಗುಡಿಸುವ ಪೊರಕೆ, ತರಕಾರಿ ಸಸಿಗಳನ್ನು ಇರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts