More

    ಸ್ತ್ರೀ ಶೋಷಣೆ ತಡೆಗೆ ಹಲವು ಕಾನೂನು

    ಅರಸೀಕೆರೆ: ಸ್ತ್ರೀ ಶೋಷಣೆ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಠಿಣ ಕಾನೂನುಗಳನ್ನು ಜಾರಿಗೊಳಿಸಿದೆ. ಮಹಿಳೆಯರು, ಯುವತಿಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಸಂಚಾಲಕಿ ಪ್ರೊ.ಉಷಾ ಸಲಹೆ ನೀಡಿದರು.

    ಪಟ್ಟಣದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಹಾಗೂ ಎಂ.ಕೃಷ್ಣ ಕಾನೂನು ಕಾಲೇಜು ವತಿಯಿಂದ ಇತ್ತೀಚೆಗೆ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ವರದಕ್ಷಿಣಿ, ಕೌಟುಂಬಿಕ ದೌರ್ಜನ್ಯ, ಕರ್ತವ್ಯ ನಿರ್ವಹಿಸುವ ಸಂಸ್ಥೆಗಳಲ್ಲಿ ನಡೆಯುವ ಕಿರುಕುಳ ಸೇರಿದಂತೆ ಹಲವು ಪಿಡುಗುಗಳಿಂದ ಸ್ತ್ರೀ ಶೋಷಣೆ ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕಾನೂನುಗಳು ಸದ್ಬಳಕೆಯಾಗಬೇಕು ಎಂದರು.

    ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ.ಸುನೀಲ್ ಕುಮಾರ್, ವಾಣಿಜ್ಯ ವ್ಯವಹಾರ, ಕಾನೂನು ವಿದ್ಯಾರ್ಥಿನಿ ಭುವನೇಶ್ವರಿ, ಭ್ರಷ್ಟಾಚಾರ ನಿಯಂತ್ರಣ, ಲೋಕಾಯುಕ್ತ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.

    ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಹರೀಶ್‌ಕುಮಾರ್, ಮಾರುತಿ, ಮಲ್ಲಿಕಾರ್ಜುನ್ ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts