More

    ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಸಹಕಾರಿ  -ಜಯಪ್ರಕಾಶ್ ಚಿಗಟೇರಿ ಹೇಳಿಕೆ

    ದಾವಣಗೆರೆ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಭಾರತ ಸ್ಕೌಟ್ಸ್- ಗೈಡ್ಸ್ ಸಹಕಾರಿಯಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್ ಚಿಗಟೇರಿ ಹೇಳಿದರು.
    ಇಲ್ಲಿನ ಧರಾಮ ಸ್ಕೌಟ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಗಳಿಸಿದರೆ ಸಾಲದು, ಗ್ರಹ ಕೃತ್ಯಗಳಲ್ಲೂ ಸ್ವಾವಲಂಬಿಗಳಾಗುವ ತರಬೇತಿ ಸಿಕ್ಕಲ್ಲಿ ಬದುಕಿನ ನೈಜ ಪರಿಚಯವಾಗಲಿದೆ ಎಂದು ಹೇಳಿದರು.
    ಸಂಸ್ಥೆಯ ನೂತನ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್ ಮಾತನಾಡಿ ಸಾಂಘಿಕ ಬದುಕು,ಉತ್ತಮ ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗಿದೆ. ಇಂಗ್ಲೆಂಡಿನ ರಾಬರ್ಟ್ ಬೇಡೆನ್ ಪೊವೆಲ್ರವರು 1907ರಲ್ಲಿ 20 ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಸ್ಕೌಟ್, ಇಂದು ವಿಶ್ವದ ಸುಮಾರು 174 ರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಮಾರು 5 ಕೋಟಿ 70 ಲಕ್ಷದಷ್ಟು ಸದಸ್ಯತ್ವ ಹೊಂದಿದೆ ಎಂದು ಸ್ಮರಿಸಿದರು.
    ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಮಾತನಾಡಿ ಶಾಲಾ ವಿದ್ಯಾರ್ಥಿಗಳು ಸ್ಕೌಟ್ಸ್-ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಶೈಕ್ಷಣಿಕ ಒತ್ತಡಗಳಿಗೆ ತುಸು ಪರಿಹಾರ ಸಿಗಲಿದೆ. ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡಲಿದೆ ಎಂದರು.
    ಉಪಾಧ್ಯಕ್ಷ ಎ. ಮಹಾಲಿಂಗಪ್ಪ, ಗೈಡ್ಸ್ ಆಯುಕ್ತೆ ಶಾರದಾ ಮಾಗಾನಹಳ್ಳಿ, ಗೌರವಾಧ್ಯಕ್ಷ ಮಹಮ್ಮದ್ ವಾಸಿಲ್, ಉಪಾಧ್ಯಕ್ಷರಾದ ಮಂಗಳಾ ವಿಶ್ವನಾಥ್, ಶಾಂತಾ ಯಾವಗಲ್ ಇದ್ದರು. ಖಜಾಂಚಿ ಬೂಸ್ನೂರು ವಿಶ್ವನಾಥ್ ಲೆಕ್ಕಪತ್ರ ಮಂಡಿಸಿದರು. ಸಹಕಾರ್ಯದರ್ಶಿ ಸಿದ್ದೇಶ್ ಮುನ್ನೋಟದ ಬಗ್ಗೆ ಪ್ರಸ್ತಾಪಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts