More

    ಸೌಲಭ್ಯಕ್ಕಾಗಿ ಆಗ್ರಹಿಸಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಧರಣಿ

    ರಾಣೆಬೆನ್ನೂರ: ಸರ್ಕಾರಿ ತಾಲೂಕು ಆಸ್ಪತ್ರೆಯ ವೈದ್ಯ ಡಾ. ಪಿ. ಶಾಂತನಿಂದ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಸರ್ಕಾರದಿಂದ ಸೂಕ್ತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಗುರುವಾರ ನಗರದ ಮಿನಿ ವಿಧಾನಸೌಧ ಎದುರು ಧರಣಿ ಆರಂಭಿಸಿದರು.
    ವೈದ್ಯನಿಂದ ವಿನಾಕಾರಣ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿ ವರ್ಷಗಳೇ ಕಳೆದಿವೆ. ಆದರೆ, ಈವರೆಗೂ ನಯಾಪೈಸೆ ಕೊಟ್ಟಿಲ್ಲ. ಅಲ್ಲದೆ ನ್ಯಾಯಕ್ಕಾಗಿ ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ನಡೆಸಲು ಹೋರಟಾಗ, ಜಿಲ್ಲಾಡಳಿತ ಈ ಬಜೆಟ್‌ನಲ್ಲಿ ಪರಿಹಾರ ನೀಡಲಿದ್ದಾರೆ ಎಂದು ಸುಳ್ಳು ಭರವಸೆ ಹೋರಾಟದ ಹಾದಿ ತಪ್ಪಿಸಿದೆ. ಆದ್ದರಿಂದ ನಮಗೆ ನ್ಯಾಯ ದೊರೆಯುವವರೆಗೂ ನಿರಂತರವಾಗಿ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
    ಪ್ರಮುಖರಾದ ಜಗದೀಶ ಕೆರೂಡಿ, ಲಲಿತಮ್ಮ ಗಂಟಿ, ಸುಮಂಗಲಾ ಪಾಟೀಲ, ಗಂಗವ್ವ ಜಾನಕೊಪ್ಪ, ಈರವ್ವ ಚವ್ಹಾಣ, ಶಾಂತವ್ವ ಕಮ್ಮಾರ, ಲಲಿತವ್ವ ರಾಠೋಡ, ದೇವರವ್ವ ಲಮಾಣಿ, ರೇಣುಕಾ ಲಮಾಣಿ, ಶಂಕ್ರವ್ವ ರಾಠೋಡ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts