More

    ಸೋಯಾಬೀನ್ ಕ್ಷೇತ್ರ ವಿಸ್ತರಿಸಲು ಯೋಜನೆ – ಡಾ. ವಿಶ್ವನಾಥ ಪಾಟೀಲ

    ಬೈಲಹೊಂಗಲ: ಕೃಷಿಯಲ್ಲಿನ ತಂತ್ರಜ್ಞಾನ ಹಾಗೂ ವಿವಿಧ ಬೆಳೆಗಳ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಲು ಕೆಎಲ್‌ಇ ಸಂಸ್ಥೆಯ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬೆಳಗಾವಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಅಧ್ಯಕ್ಷ ಡಾ. ವಿಶ್ವನಾಥ ಐ. ಪಾಟೀಲ ಹೇಳಿದರು.

    ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ವಿಶೇಷ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ಸೋಯಾಬೀನ್ ಬೀಜ ಹಾಗೂ ಇತರ ಜೈವಿಕ ಪರಿಕರಗಳನ್ನು ರೈತರಿಗೆ ಉಚಿತವಾಗಿ ಪೂರೈಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ವಿಶೇಷ ಯೋಜನೆಯಡಿ ರೈತರಿಗೆ ಸುಧಾರಿತ ತಳಿಯ ಸೋಯಾಬೀನ್ ಬೀಜ ಪೂರೈಸಲಾಗುತ್ತಿದೆ. ದೇಶವು ಅಡುಗೆ ಎಣ್ಣೆ ಆಮದು ಕಡಿಮೆ ಮಾಡಲು ಸೋಯಾಬೀನ್ ಬೆಳೆಯ ಕ್ಷೇತ್ರ ವಿಸ್ತರಿಸಲು ಯೋಜಿಸಿದೆ.

    ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಅಧಿಕ ಇಳುವರಿ ನೀಡುವ ತಳಿಯನ್ನು ಪರಿಚಯಿ ಸುತ್ತಿದೆ. ರೈತರು ಈ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರದ ಸುಧಾರಿತ ತಂತ್ರಜ್ಞಾನ ಉಪ ಯೋಗಿಸಿ ಬೆಳೆಸಿದಲ್ಲಿ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂದರು. ಕೃಷಿ ವಿಜ್ಞಾನ ಕೇಂದ್ರದ ಚೇರ್ಮನ್ ಬಿ.ಆರ್.ಪಾಟೀಲ, ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಬಿ. ಅಂಗಡಿ, ಎಸ್.ಎಂ. ವಾರದ, ಜಿ.ಬಿ. ವಿಶ್ವನಾಥ ಹಾಗೂ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts