More

    ಸೋಮೇಶ್ವರಸ್ವಾಮಿ ರಥೋತ್ಸವ ಸಂಪನ್ನ

    ಕೋಲಾರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಕಾವಾಕ್ಷಾಂಬಾ ಸಮೇತ ಶ್ರೀ ಪ್ರಸನ್ನ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶುಕ್ರವಾರ ಎಸ್.ಮುನಿಸ್ವಾಮಿ ಚಾಲನೆ ನೀಡಿದ್ದು, ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಸುಪ್ರಭಾತ ಸೇವೆ, ಮಹಾಲಕ್ಷ್ಮೀ ಅಮ್ಮನವರಿಗೆ ಕುಂಕುವಾರ್ಚನೆ, ಸಹಸ್ರ ನಾವಾರ್ಚನೆ, ಗರುಡೋತ್ಸವ, ಧ್ವಜಾರೋಹಣ ವಾಡಲಾಗಿತ್ತು. ಮಧ್ಯಾಹ್ನ ರಥಶಾಂತಿ, ರಥಬಲಿ, ಆಚಾರ್ಯ ಪೂಜೆ ನಡೆದು ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ವಿದ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ನೆರೆದಿದ್ದ ಭಕ್ತರು ಸ್ವಾಮಿಯ ಸ್ಮರಣೆಯೊಂದಿಗೆ ರಥ ಎಳೆದರು. ಬಾಳೆಹಣ್ಣು, ಹೂವು, ಧವನ ಅರ್ಪಿಸಿ ಹರಿಕೆ ತೀರಿಸಿದರು.

    ದೇವಾಲಯ ಮುಂಭಾಗದಿಂದ ರಥವನ್ನು ಎಳೆದ ಭಕ್ತರು ಕಾಲೇಜು ವತ್ತದವರೆಗೆ ತಂದರು. ನಂತರ ಶಂಕರ ಮಠ ಮುಂಭಾಗದ ರಸ್ತೆ, ಮತ್ತಿತರ ಕಡೆ ಸಂಚರಿಸಿತು. ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ರಥೋತ್ಸವ ನಡೆಯುತ್ತಿದ್ದು, 2 ವರ್ಷದಿಂದ ಕರೊನಾ ಕಾರಣ ಅದ್ದೂರಿ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ಯಾವುದೇ ಅಡೆತಡೆ ಇರದ ಪ್ರಯುಕ್ತ ಚಿಕ್ಕ ತೇರಿಗೆ ಬದಲಾಗಿ ಮೊದಲು ಆಚರಣೆ ವಾಡುತ್ತಿದ್ದಂತೆಯೇ ದೊಡ್ಡ ರಥದಲ್ಲಿಯೇ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಅರ್ಚಕರಾದ ಸೋಮಶೇಖರ ದೀಕ್ಷಿತ್, ರಾಜದೀಕ್ಷಿತ್, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts