More

    ಸೋತವರಿಗೆ ಮಣೆ ಹಾಕುವುದು ಯಾವ ನ್ಯಾಯ?

    ಚಿತ್ರದುರ್ಗ: ಸೋತವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿದೆ ಎಂದು ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಆನೇಕಲ್‌ನಲ್ಲಿ ಪರಾಜಿತಗೊಂಡವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಎಂಪಿ ಮಾಡಿದ್ದಾಗಿದೆ. ಈಗ ಮುಧೋಳದಲ್ಲಿ ಸೋಲುಂಡ ಅಭ್ಯರ್ಥಿ ಕಣಕ್ಕಿಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಇಲ್ಲಿನ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರ ಪೈಕಿ ಬಿಜೆಪಿಯಿಂದ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದರೂ ಪರಿಗಣಿಸಿಲ್ಲ. ಕೊನೆ ಗಳಿಗೆಯಲ್ಲಿ ಗೋವಿಂದ ಎಂ.ಕಾರಜೋಳ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಪಕ್ಷದ ಈ ನಡೆಯಿಂದ ಅತ್ಯಂತ ನೋವುಂಟಾಗಿದ್ದು, ಖಂಡಿಸುತ್ತೇನೆ ಎಂದರು.

    ದುರ್ಗ ಹೆಸರಿಗೆ ಮಾತ್ರ ಗಂಡು ಮೆಟ್ಟಿದ ನಾಡು ಎಂಬಂತಾಗಿದೆ. ಸ್ಥಳೀಯರನ್ನು ಕಡೆಗಣಿಸಿದಾಗ ಜನರೇಕೆ ಪ್ರಶ್ನಿಸುತ್ತಿಲ್ಲ. ನಮ್ಮ ಭಾಗದ ಕಟ್ಟಕಡೆಯ ನಾಯಕರು ಬೆಳೆಯಬೇಕಲ್ಲವೇ?. ರಾಜವೀರ ಮದಕರಿ ನಾಯಕರ ಕಾಲದಿಂದಲೂ ಮೈಸೂರಿನ ಹಲವರು ಇಲ್ಲಿ ಅಧಿಪತ್ಯ ಸ್ಥಾಪಿಸಿರುವುದು ನೋಡಿದ್ದೇವೆ. ಈಗಲೂ ಹೊರಗಿನವರನ್ನೇ ಕರೆತರುತ್ತಿದ್ದು, ನಿರಾಶ್ರಿತರ ಕೇಂದ್ರ ಎಂದು ಕಿಡಿಕಾರಿದರು.

    ಸ್ಥಳೀಯರಲ್ಲಿ ಗೆಲ್ಲುವ ಶಕ್ತಿ ಇಲ್ಲವೇ?
    ಕುಟುಂಬ ರಾಜಕಾರಣ ಕಾರಣಕ್ಕೆ ನನಗೆ ಬೇಡ. ಜನಾರ್ದನಸ್ವಾಮಿ ಸೇರಿ ಯಾರಿಗಾದರೂ ಅವಕಾಶ ನೀಡಬಹುದಿತ್ತು. ಆ ಕೆಲಸ ಮಾಡಲಿಲ್ಲ. ನನಗೆ ಎರಡನೇ ಬಾರಿ ಅನ್ಯಾಯವಾಗಿದೆ. ಇದಕ್ಕೆ ನಾನೂ ನಂಬಿರುವ ಭಗವಂತ ಉತ್ತರ ಕೊಡುತ್ತಾನೆ ಎಂದರು.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ತುಂಬಾ ನಂಬಿದ್ದೆ. ಮನೆ ಬಾಗಿಲಿಗೆ ಹೋದರೂ ಸೌಜನ್ಯಕ್ಕೂ ಕರೆದು ಮಾತನಾಡಿಸಲಿಲ್ಲ. ನಮ್ಮ ಅಭಿಮಾನ, ಪ್ರೀತಿಯನ್ನು ದೌರ್ಬಲ್ಯ ಎಂದುಕೊಂಡರೇ ಅದು ಅವರ ದೌರ್ಬಲ್ಯ. ಹೊರಗಿನವರು ಗೆದ್ದರೆ ಸ್ಥಳೀಯರ ಸಮಸ್ಯೆ, ನೋವಿಗೆ ಸ್ಪಂದಿಸುವುದಿಲ್ಲ. ಹೀಗಿರುವಾಗಿ ದೂರದೂರಿಂದ ಬಂದು ಕಾರಜೋಳ ಸ್ಪಂದಿಸುತ್ತಾರಾ ಎಂದು ಪ್ರಶ್ನಿಸಿದರು.

    ನಾವೆಲ್ಲ ನರೇಂದ್ರಮೋದಿ ಅಭಿಮಾನಿಗಳು. ಮತ್ತೊಮ್ಮೆ ಅವರು ಪ್ರಧಾನಿ ಆಗಬೇಕೆಂಬ ನಿಟ್ಟಿನಲ್ಲಿ ಪಕ್ಷಕ್ಕಾಗಿ ಶ್ರಮಿಸುತ್ತಿದ್ದೇವೆ. ಆದರೂ ನನಗೆ ಟಿಕೆಟ್ ತಪ್ಪಿಸುವಲ್ಲಿ ಕಳ್ಳಿನರಸಪ್ಪನ ಮಾದರಿಯಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಎಲ್ಲಿಯವರೆಗೂ ದಬ್ಬಾಳಿಕೆ, ದೌರ್ಜನ್ಯ ಸಹಿಸೋದು. ಚಿತ್ರದುರ್ಗದ ಆಸ್ಮಿತೆ ಪ್ರಶ್ನೆ ಇದಾಗಿದ್ದು, ಸ್ಥಳೀಯರಿಗೆ ಸ್ವಾಭಿಮಾನ ಇಲ್ಲ ಎಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

    ಮೀಸಲು ಕ್ಷೇತ್ರದಲ್ಲಿ ಜಿಲ್ಲೆಗೆ ನ್ಯಾಯ ಸಿಗಬೇಕು. ಸ್ಥಳೀಯರ ಮತ, ಕಾರ್ಯಕರ್ತರ ಶ್ರಮ ಬೇಕು. ಆದರೆ, ಸ್ಥಳೀಯರಿಗೆ ಟಿಕೆಟ್ ನೀಡುವುದಿಲ್ಲ. ಇದೆಂಥಾ ಸಿದ್ಧಾಂತ. ಇದಕ್ಕಾಗಿ ಮಾ. 29ರಂದು ಕಾರ್ಯಕರ್ತರ, ಬೆಂಬಲಿಗರ ಸಭೆ ಕರೆದು ತೀರ್ಮಾನಿಸಿ, ಮುಂದಿನ ನಡೆ ಪ್ರಕಟಿಸುವುದಾಗಿ ರಘುಚಂದನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts