More

    ಸೋಂಕಿತರ ಕಿರಿಕ್ಗೆ ವೈದ್ಯ ಸಿಬ್ಬಂದಿ ಪರೇಶಾನ್

    ಬಾಬುರಾವ ಯಡ್ರಾಮಿ ಕಲಬುರಗಿ: ಕರೊನಾ ಸೋಂಕಿತರು ಮತ್ತು ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಇಎಸ್ಐಸಿ ಆಸ್ಪತ್ರೆಯಲ್ಲಿ ತೆಪ್ಪಗಿರುವುದನ್ನು ಬಿಟ್ಟು ಇನ್ನಿಲ್ಲದ ಕಿರಿಕ್ ಮಾಡುತ್ತಿದ್ದಾರೆ. ಸಿಬ್ಬಂದಿ ಜತೆ ವಿನಾಕಾರಣ ವಾಗ್ವಾದಕ್ಕಿಳಿಯುತ್ತಿದ್ದಾರೆ. ಕೆಲ ಸೋಂಕಿತರ ಅನುಚಿತ ವರ್ತನೆಗೆ ವೈದ್ಯರು ಮತ್ತು ಸಿಬ್ಬಂದಿ ತಬ್ಬಿಬ್ಬುಗೊಂಡಿದ್ದಾರೆ.
    ಸೇಡಂ ರಸ್ತೆಯ ಇಎಸ್ಐಸಿ ಹಾಸ್ಟಿಟಲ್ ಕೋವಿಡ್ ಆಸ್ಪತ್ರೆಯಾಗಿದ್ದು, ಸೋಂಕಿತರು ಮತ್ತು ಶಂಕಿತರನ್ನು ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುದಲ್ಲಿರುವ ಬಹುತೇಕರು ಸುಮ್ಮನೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನೀಡಿದ ಸಲಹೆ ಪಾಲಿಸುತ್ತಿದ್ದಾರೆ. ಆದರೆ ಕೆಲ ಶಂಕಿತರು ಮತ್ತು ಕ್ವಾರಂಟೈನ್ಗಳು ಇನ್ನಿಲ್ಲದ ರಗಳೆ ಮಾಡುತ್ತ ತೊಂದರೆ ನೀಡುತ್ತಿದ್ದರಿಂದ ಪರೇಶಾನ್ ಆಗಿದ್ದಾರೆ.
    ಸೋಂಕಿತರ ಗಲಾಟೆ ಬಗ್ಗೆ ವೈದ್ಯರು ಮತ್ತು ಮೇಲಧಿಕಾರಿಗಳ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳಬೇಡಿ. ನೀವು ನಿಮ್ಮ ಕೆಲಸ ಮಾಡಿ ಎಂದು ಹೇಳಿ ಸಮಾಧಾನ ಮಾಡುತ್ತಿದ್ದಾರೆ. ಈಗ ಕಾಲ ಸೂಕ್ಷ್ಮವಾಗಿದ್ದರಿಂದ ಮೊದಲು ಅವರಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳುತ್ತಿರುವುದು ಸಿಬ್ಬಂದಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
    ಇನ್ನು ಐಸೋಲೇಷನ್ನಲ್ಲಿ ಕೆಲವರು ಬ್ಯಾಸರಕಿ ಆಗ್ಯಾದಂತ ಹೇಳಿ ಹೊರಗಡೆ ಬಂದು ಒಡಾಡುತ್ತಿದ್ದಾರೆ. ಅವರನ್ನು ಹಿಡಿದು ಮತ್ತೆ ಕೋಣೆಗೆ ಸೇರಿಸುವುದೇ ದೊಡ್ಡ ತಲೆನೋವು. ಶಂಕಿತರು ಸಣ್ಣ ಪುಟ್ಟ ಕಾರಣಗಳಿಗೂ ಗಲಾಟೆ ಮಾಡುವುದು, ಸಿಬ್ಬಂದಿ ಜತೆಗೆ ವಾಗ್ವಾದಕ್ಕಿಳಿದ ಘಟನೆಗಳು ನಡೆದಿದೆ.
    ಇಬ್ಬರು ಮಹಿಳೆಯರಂತೂ ನೀವು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಬೇಕಂತಲೇ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ. ದೆಹಲಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಕೆಲವರು ಸಹ ಇದೇ ರೀತಿ ವರ್ತಿಸಿದ್ದರು. ಅವರಲ್ಲಿ ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಸೋಂಕಿತರು ಮತ್ತು ಶಂಕಿತರು ಮೇಲಿಂದ ಮೇಲೆ ಕಿರಿಕಿರಿ ಮಾಡುತ್ತಿದ್ದರಿಂದ ಚೀನಿ ವೈರಸ್ ಸೋಂಕಿತರು ಮತ್ತು ಶಂಕಿತರನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ.

    ಕರೊನಾ ಸೋಂಕಿತರಿಗೆ ಜೀವದ ಹಂಗು ತೊರೆದು ಚಿಕಿತ್ಸೆ ನೀಡುತ್ತಿದ್ದೇವೆ. ಅದನ್ನು ಅರಿತು ಅವರು ಸಹಕರಿಸಬೇಕು. ಅದುಬಿಟ್ಟು ಪ್ರತಿದಿನ ವೈದ್ಯಕೀಯ ಸಿಬ್ಬಂದಿ ಜತೆ ಜಗಳ, ಇಲ್ಲದ ಕಿರಿಕರಿ ಮಾಡುತ್ತಿರುವ ಬಗ್ಗೆ ಸಿಬ್ಬಂದಿ ಗೋಳಿಡುತ್ತಿದ್ದಾರೆ. ಆದರೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸಹಕರಿಸುವಂತೆ ಕೋರಲಾಗಿದೆ. ಐಸೋಲೇಷನ್ ಕೋಣೆಯಿಂದ ಹೊರಗೆ ಬಂದು ಓಡಾಡುತ್ತಾರಂತೆ. ಸೋಂಕಿತರು ಮತ್ತು ಶಂಕಿತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
    | ಹೆಸರು ಹೇಳಲು ಇಚ್ಛಿಸದ ವೈದ್ಯರು


    ಸೋಂಕಿತರು ಮತ್ತು ಶಂಕಿತರಿಗೆ ಪ್ರತಿದಿನ ನಿಗದಿಪಡಿಸಿದಂತೆ ಊಟ-ತಿಂಡಿ ಕೊಡಲಾಗುತ್ತಿದೆ. ಆದರೆ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಜಗಳವಾಡುತ್ತಾರೆ. ನಮಗೆ ಅಂತಹ ಊಟ ಬೇಕು ಎನ್ನುತ್ತಾರೆ. ಒಂದಿಬ್ಬರಂತೂ ಬಿರಿಯಾನಿ ಬೇಕು ಎಂದಿದ್ದು, ಎಲ್ಲಿಂದ ತರಬೇಕು? ಇಂಥ ನಿತ್ಯದ ಕಿರಿಕಿರಿಯಿಂದ ಸಾಕಾಗಿ ಹೋಗಿದೆ. ಆದರೂ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ.
    | ಹೆಸರು ಹೇಳಲಿಚ್ಛಿಸದ ಇಎಸ್ಐಸಿ ನರ್ಸಿಂ ಗ್ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts