More

    ಸೋರುತ್ತಿವೆ ಕಟ್ಟಡಗಳ ಸೂರು

    ಭಟ್ಕಳ: ಪಟ್ಟಣದಲ್ಲಿ ಕೆಲ ಖಾಸಗಿ ಮಾಲೀಕತ್ವದ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಆದರೆ ಕರೊನಾ ಕಾರಣದಿಂದ ಸೋರುವ ಸೂರನ್ನು ದುರಸ್ತಿ ಮಾಡಲು ಆಡಳಿತ ಪರವಾನಗಿ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

    ತಾಲೂಕಿನಲ್ಲಿ ಕೆಲ ಹೋಟೆಲ್​ಗಳು, ಅಂಗಡಿಗಳು, ಮನೆ ಸೇರಿ ಅನೇಕ ಕಟ್ಟಡಗಳನ್ನು ಮಳೆಗಾಲದ ಮೊದಲು ದುರಸ್ತಿ ಮಾಡಿಸಿಕೊಳ್ಳುವುದು ವಾಡಿಕೆ. ಮೊದಲು ಪುರಸಭೆಯಿಂದ ಪರವಾನಗಿ ಪಡೆದರೆ ಸಾಕಿತ್ತು. ಆದರೆ, ಈಗ ಎಲ್ಲದಕ್ಕೂ ಉಪವಿಭಾಗಾಧಿಕಾರಿಗಳನ್ನೆ ಆಶ್ರಯಿಸಬೇಕು. ಕಟ್ಟಡ ದುರಸ್ತಿ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಈಗಾಗಲೇ ಕೆಲವರು ಎಸಿ ಕಚೇರಿಗೆ ತೆರಳಿ ಮನವಿ ನೀಡಿದ್ದಾರೆ. ಆದರೆ, ಈವರೆಗೂ ಉಪವಿಭಾಗಾಧಿಕಾರಿ ಅವರಿಂದ ಬಂದಿಲ್ಲ ಎಂದು ಅರ್ಜಿ ಸಲ್ಲಿಸಿದ ಕೆಲವರು ತಿಳಿಸಿದ್ದಾರೆ.

    ಹವಾಮಾನ ಇಲಾಖೆಯ ಮಾಹಿತಿಯಂತೆ ಜೂ. 3ರಿಂದ ಮಾನ್ಸೂನ್ ಆರಂಭವಾಗಲಿದೆ. ಮಳೆಗಾಲ ಆರಂಭವಾಗಲು ಬೆರಳಣಿಕೆಯಷ್ಟು ದಿನಗಳಿವೆ. ಕಳೆದ ವರ್ಷ ಭಟ್ಕಳದಲ್ಲಿ ಹೆಚ್ಚು ಮಳೆಯಾಗಿತ್ತು. ಆದರೆ, ಕಟ್ಟಡ ದುರಸ್ತಿಗೆ ಪರವಾನಗಿ ನೀಡಲು ತಾಲೂಕಾಡಳಿತ ಮುಂದಾಗಿಲ್ಲ. ಕೆಲವೊಂದನ್ನು ಹೊರತುಪಡಿಸಿ ಉಳಿದವುಗಳಿಗೆ ಸರ್ಕಾರ ಸಡಿಲಿಕೆ ನೀಡಿರುವಾಗ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡ ದುರಸ್ತಿಗೆ ಏಕೆ ಪರವಾನಗಿ ನೀಡುತ್ತಿಲ್ಲ ಎಂಬುದು ಸದ್ಯದ ಪ್ರಶ್ನೆಯಾಗಿದೆ.

    ಭಟ್ಕಳ ಕಂಟೇನ್ಮೆಂಟ್ ಜೋನ್ ಆಗಿದ್ದು, ಹಳೆಯ ಕಟ್ಟಡಗಳ ದುರಸ್ತಿಗೆ ಅನುಮತಿ ನೀಡಲು ರ್ಚಚಿಸಬೇಕಾಗಿದೆ. ಮುಂದಿನ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ರ್ಚಚಿಸಿ ಅವಶ್ಯಕತೆ ಇದ್ದವರಿಗೆ ದುರಸ್ತಿಗೆ ಪರವಾನಗಿ ನೀಡುವ ಕುರಿತು ನಿಯಮ ರೂಪಿಸಲಿದ್ದೇವೆ. ಈಗಾಗಲೇ ಅರ್ಜಿ ನೀಡಿದವರ ಮನವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
    | ಭರತ್ ಸೆಲ್ವಂ ಉಪವಿಭಾಗಾಧಿಕಾರಿ ಭಟ್ಕಳ

    ಭಟ್ಕಳ ಕಂಟೇನ್ಮೆಂಟ್ ಜೋನ್ ಆಗಿರುವುದರಿಂದ ನಮ್ಮ ಗೋಶಾಲೆಯ ಶೆಡ್ ನಿರ್ವಿುಸಲು ತೊಂದರೆಯಾಗಿದೆ. ಮಳೆ ಯಾವಾಗಲಾದರೂ ಬರಬಹುದು. ಉಪವಿಭಾಗಾಧಿಕಾರಿಗಳು ಆದಷ್ಟು ಬೇಗ ಈ ಕುರಿತು ಮಾನದಂಡ ರಚಿಸಿ ಅನುಮತಿ ನೀಡಬೇಕು.
    | ರಾಮದಾಸ ಪ್ರಭು ಶ್ರೀ ನಾಗಯಕ್ಷೆ ಗೋಶಾಲೆ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts