More

    ಸೋರುತಿದೆ ಸಾರ್ವಜನಿಕ ಗ್ರಂಥಾಲಯ

    ಹಳಿಯಾಳ: ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತವಾದ ಗ್ರಂಥಾಲಯವೆಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಮತ್ತೆ ಸೋರಲಾರಂಭಿಸಿದೆ.

    2015ರಲ್ಲಿ ಹಳಿಯಾಳ ಪುರಸಭೆಯಿಂದ 40 ಲಕ್ಷ ರೂ. ಅನುದಾನದಲ್ಲಿ ಗ್ರಂಥಾಲಯದ ಡ್ಯೂಪ್ಲೆಕ್ಸ್ ಮಾದರಿಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಗ್ರಂಥಾಲಯ ಲೋಕಾರ್ಪಣೆಗೊಂಡ ಮರು ವರ್ಷದಿಂದಲೇ ಸೋರಲಾರಂಭಿಸಿದೆ.

    ಗ್ರಂಥಾಲಯ ಸೋರುತ್ತಿರುವ ಬಗ್ಗೆ ಓದುಗರು ಪುರಸಭೆಗೆ ನೂರಾರು ಬಾರಿ ದೂರು ನೀಡಿದ್ದರೂ, ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ. ಕಳೆದ ವರ್ಷ ಬಾರಿ ಮಳೆಯಾಗಿದ್ದರಿಂದ ಗ್ರಂಥಾಲಯದ ಸಿಬ್ಬಂದಿಗೆ ಮಳೆ ನೀರು ಹೊರ ಹಾಕುವುದೇ ದೊಡ್ಡ ಕಸರತ್ತಾಗಿತ್ತು. ಟೈಲ್ಸ್ ಮೇಲೆ ಬಿದ್ದ ಮಳೆ ನೀರಿನಿಂದ ಓದುಗರು ಜಾರಿ ಬೀಳುತ್ತಿರುವುದರಿಂದ ಗ್ರಂಥಾಲಯದಲ್ಲಿ ಗೋಣಿ ಚೀಲವ ಹಾಸಿ ನೀರು ಇಂಗಿಸುವ ಪ್ರಯತ್ನವನ್ನು ಸಿಬ್ಬಂದಿ ನಡೆಸಿದ್ದರು. ಈಗ ಕಳೆದೆರೆಡು ದಿನಗಳಿಂದ ಪಟ್ಟಣದಲ್ಲಿ ಸಾಧಾರಣ ಮಳೆ ಬೀಳುತ್ತಿದ್ದು, ಅಷ್ಟಕ್ಕೆ ಗ್ರಂಥಾಲಯದ ಗಾಜಿನ ಹಾಸಿನಿಂದ ಮಳೆ ನೀರು ಸೋರಲಾರಂಭಿಸಿದೆ. ನೀರು ಹರಿಯುವುದನ್ನು ತಡೆಯಲು ಮತ್ತೇ ಗೋಣಿ ಚೀಲಗಳನ್ನು ಹಾಸಿರುವ ಸಿಬ್ಬಂದಿ ದುರಸ್ತಿಗಾಗಿ ಪುರಸಭೆಯ ದಾರಿಯನ್ನು ಕಾಯುತ್ತಿದ್ದಾರೆ.

    ಗ್ರಂಥಾಲಯ ಸೋರುತ್ತಿರುವ ಕುರಿತು ಮಾಹಿತಿ ಬಂದಿದೆ. ಕಟ್ಟಡ ನಿರ್ವಿುಸಿದ ಗುತ್ತಿಗೆದಾರನನ್ನು ಕರೆಯಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸುತ್ತೇನೆ.

    | ಕೇಶವ ಚೌಗಲೆ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts