More

    ಸೋಂಕು ಮುಕ್ತ ಮೂವರ ಬಿಡುಗಡೆ

    ಕಾರವಾರ: ಮೂರ್ಛೆ ರೋಗದಿಂದ ಬಳಲುತ್ತಿದ್ದ ಐದು ತಿಂಗಳಿನ ಕರೊನಾ ಸೋಂಕಿತ ಮಗುವನ್ನು ಇಲ್ಲಿನ ಕ್ರಿಮ್ಸ್​ನ ತಜ್ಞ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.

    ಗುರುವಾರ ಕ್ರಿಮ್್ಸ ಆಸ್ಪತ್ರೆಯಿಂದ 76 ವರ್ಷದ ವೃದ್ಧೆ (ಪಿ-744), 2 ವರ್ಷದ ಹೆಣ್ಣು ಮಗು(ಪಿ-1206) ಹಾಗೂ 5 ತಿಂಗಳ ಹೆಣ್ಣು ಮಗು(ಪಿ-747)ವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಭಟ್ಕಳದ ಹೋಟೆಲ್ ಕ್ವಾರಂಟೈನ್​ಗೆ ಕಳಿಸಲಾಗಿತ್ತು. ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ, ಡಾ. ಶಿವಾನಂದ ಕುಡ್ತಲಕರ್ ಹಾಗೂ ಇತರ ವೈದ್ಯರು ಗುಣಪಟ್ಟ ಎಲ್ಲರನ್ನೂ ಅಭಿನಂದಿಸಿ, ಪುಷ್ಪಗುಚ್ಛ ನೀಡಿ ಬೀಳ್ಕೊಟ್ಟರು.

    ಮಕ್ಕಳ ತಜ್ಞರ ಸಾಧನೆ: ಐದು ತಿಂಗಳ ಹೆಣ್ಣು ಮಗುವಿಗೆ ಮೂರ್ಛೆ ರೋಗವಿತ್ತು. ಅಲ್ಲದೆ, ಮಿದುಳಿನ ಬೆಳವಣಿಗೆಯೂ ಕುಂಠಿತವಾಗಿತ್ತು. ಇದರಿಂದ ಕಂಗಾಲಾಗಿದ್ದ ಭಟ್ಕಳ ಮೂಲದ ಮಗುವಿನ ತಂದೆ-ತಾಯಿ ಕರೊನಾ ಲಾಕ್​ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲೂ ಏ.20ರಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದರು. ಆದರೆ, ದುರಾದೃಷ್ಟದ ಸಂಗತಿ ಎಂದರೆ ಅಲ್ಲಿಯೇ ಮಹಾಮಾರಿ ಮಗು ಹಾಗೂ ತಂದೆ-ತಾಯಿಯನ್ನು ಆವರಿಸಿತ್ತು. ಅಷ್ಟೇ ಅಲ್ಲ ಆ ಕುಟುಂಬ ಹಾಗೂ ಅವರ ಸಂಪರ್ಕಕ್ಕೆ ಬಂದ 20 ಜನರಿಗೂ ಕರೊನಾ ಸೋಂಕು ತಗಲಲು ಕಾರಣವಾಗಿತ್ತು.

    ಕಾರವಾರ ಕ್ರಿಮ್್ಸ ಆಸ್ಪತ್ರೆಯ ತಜ್ಞ ಡಾ. ವಿಶ್ವನಾಥ, ಡಾ. ಪ್ರವೀಣ ಹಾಗೂ ಆರೋಗ್ಯ ಇಲಾಖೆಯ ಡಾ.ಸೋನಿಯಾ ಕರೊನಾಗೆ ಚಿಕಿತ್ಸೆ ನೀಡುವ ಜತೆಗೆ ಮಗುವಿನ ಅಪಸ್ಮಾರ ಕಾಯಿಲೆಗೂ ಚಿಕಿತ್ಸೆ ನೀಡಿದ್ದಾರೆ. ಮಗು ಎರಡೂ ರೋಗದಿಂದ ಚೇತರಿಸಿಕೊಂಡಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಕ್ರಿಮ್್ಸ ವೈದ್ಯರ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts