More

    ಸೈಬರ್ ಕೆಫೆ ಪರಿಶೀಲಿಸಿದ ಎಸಿ

    ಶಿರಸಿ: ಸಾರ್ವಜನಿಕರಿಂದ ಕೆಲ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿರುವ ಸೈಬರ್ ಕೆಫೆಗಳ ಮೇಲೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಬುಧವಾರ ಏಕಾಏಕಿ ಕಾರ್ಯಾಚರಣೆ ನಡೆಸಿದರು. ತಾಲೂಕಿನಲ್ಲಿ 14 ಸೈಬರ್ ಕೆಫೆಗಳಿದ್ದು ಅಲ್ಲಿ ರೇಷನ್, ಆಧಾರ, ಪಾನ್, ವೋಟರ್ ಕಾರ್ಡ್ ಸೇರಿ ಸರ್ಕಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕರಿಗೆ ಮಾಡಿಕೊಡುತ್ತಿದ್ದಾರೆ. ಆದರೆ, ಇಲ್ಲಿ ಕೆಲವೊಂದು ಕೆಫೆಗಳು ದುರುಪಯೋಗ, ನಕಲಿ ಕಾರ್ಡ್​ಗಳು ಮತ್ತು ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರು ಬುಧವಾರ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರೊಂದಿಗೆ ಕಾರ್ಯಾಚರಣೆ ನಡೆಸಿ, ಸರ್ಕಾರ ನೀಡಿದ ಅವಕಾಶವನ್ನು ಕೆಫೆಗಳ ಮಾಲೀಕರು ದುರುಪಯೋಗ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ಡಿವೈಎಸ್​ಪಿ ಜಿ.ಟಿ. ನಾಯಕ, ಸಿಪಿಐ ಪ್ರದೀಪ ಬಿ.ಯು., ಪಿಎಸ್​ಐ ಶಿವಾನಂದ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts