More

    ಸೇವಾ ಮನೋಭಾವ ಮೈಗೂಡಿಸಿಕೊಳ್ಳಿ

    ಮುನವಳ್ಳಿ: ಸಮಾಜ ನನಗೇನು ಮಾಡಿತು ಎನ್ನುವ ಬದಲು ಸಮಾಜಕ್ಕಾಗಿ ನಾನೇನು ಮಾಡಿದೆ ಎನ್ನುವ ಚಿಂತನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಪಟ್ಟಣದ ಸೋಮಶೇಖರ ಮಠದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ ಅವರ 47 ನೇ ಜನ್ಮ ದಿನದ ಅಂಗವಾಗಿ ಸಸಿ ವಿತರಣಾ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಸತ್ಕರಿಸಿ ಮಾತನಾಡಿದ ಅವರು, ಮುರುಘೇಂದ್ರ ಸ್ವಾಮೀಜಿ ಧಾರ್ಮಿಕ ಜಾಗೃತಿಯ ಜತೆಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ರಾಂತಿಯನ್ನು ಈ ಭಾಗದಲ್ಲಿ ಮಾಡಿದ್ದಾರೆ. ಧಾರ್ಮಿಕವಾಗಿ ಬೆಳೆಯುವಲ್ಲಿ ಶ್ರೀ ಮಠದ ಪ್ರೇರಣೆ ಬಹಳ ಇದೆ ಎಂದರು.

    ಮುಖಂಡರಾದ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಮುರುಘೇಂದ್ರ ಸ್ವಾಮೀಜಿ ಎಲ್ಲ ಜನಾಂಗದವರನ್ನು ಸಮಭಾವದಿಂದ ಕಂಡು, ಭಕ್ತರ ಏಳಿಗೆಗಾಗಿ ಸದಾ ಚಿಂತನೆ ಮಾಡುವುದರ ಜತೆಗೆ ಭಕ್ತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ ಎಂದರು.

    ಗುರುವಂದನೆ ಸ್ವೀಕರಿಸಿ ಮಾತನಾಡಿದ ಮುರುಘೇಂದ್ರ ಸ್ವಾಮೀಜಿ, ಪ್ರತಿಯೊಬ್ಬರೂ ಸಮಾಜ ಸೇವೆಯ ದೀಕ್ಷೆಯನ್ನು ತೊಡುವುದರ ಜತೆಗೆ ನೀಡಿದ ಸಸಿಗಳನ್ನು ಬೆಳೆಸಿ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಬೇಕು. ಉತ್ತಮ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಎಲ್ಲ ಸಮಾಜದವರ ಭಕ್ತಿ ಹಾಗೂ ಪ್ರೀತಿ ನಮ್ಮ ಮಠದ ಮೇಲಿದೆ ಎಂದರು.

    ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ಎಂ.ಆರ್.ಗೋಪಶೆಟ್ಟಿ, ರಮೇಶ ಗೋಮಾಡಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಡಾ.ರವಿ ಹನಸಿ, ಮೋಹನ ಕಾಮಣ್ಣವರ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಯಶವಂತ ಯಲಿಗಾರ, ಈರಣ್ಣ ಕಮ್ಮಾರ, ದುಂಡಪ್ಪ ಬುರ್ಜಿ, ಶ್ರೀಶೈಲ ಗೋಪಶೆಟ್ಟಿ, ವಿಠ್ಠಲ ನಲಗೆ, ಬಿ.ಬಿ.ಹುಲಿಗೊಪ್ಪ, ಗಂಗಾಧರ ಗೊರಾಬಾಳ, ಮಂಜುನಾಥ ಭಂಡಾರಿ, ಸಹಜ ಸ್ಥಿತಿಯೋಗ ಸತ್ಸಂಗ ಬಳಗ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಬಳಗ, ಅನ್ನದಾನೇಶ್ವರ ಮಹಿಳಾ ಬಳಗದ ಸದಸ್ಯರು ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts