More

    ಸೇವಾ ಮನೋಭಾವ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ

    ಬೆಟ್ಟದಪುರ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಎಸ್‌ಎಂಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಬಿ.ವಿ.ಮಂಜುನಾಥ್ ತಿಳಿಸಿದರು. ಬೆಟ್ಟದಪುರ ಸಮೀಪದ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಎಸ್‌ಎಂಎಸ್ ಕಾಲೇಜುವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದೊಂದಿಗೆ ಮಕ್ಕಳಿಗೆ ಸೇವಾ ಮನೋಭಾವವೂ ಮುಖ್ಯವಾಗಿದೆ. ಅದಕ್ಕಾಗಿ ಇಂತಹ ಶಿಬಿರಗಳು ಅರ್ಥಪೂರ್ಣವಾಗಿವೆ. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸಿಗುವಂತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮದ ದೇವಸ್ಥಾನ ಹಾಗೂ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಅಲ್ಲದೇ ಏಳು ದಿನದ ಶಿಬಿರದಲ್ಲಿ ನಿತ್ಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಾಂಸ್ಖತಿಕ ಕಾರ್ಯಕ್ರಮ ನಡೆಸಿಕೊಟ್ಟ ವಿದ್ಯಾರ್ಥಿಗಳು ನೃತ್ಯದ ಸೊಬಗಿನ ಮೂಲಕ ಮನರಂಜಿಸಿದರು.ಶಿಕ್ಷಣತಜ್ಞ ವಸಂತರಾಜೇ ಅರಸ್, ಮುಖಂಡರಾದ ಜವರೇಗೌಡ, ಪ್ರಸನ್ನ, ಮಾದೇಗೌಡ, ರಾಜು, ಹರೀಶ್, ಮಹೇಶ್, ಪ್ರಾಂಶುಪಾಲ ಎಸ್.ಕೆ ರಾಜ, ಶಿಬಿರಾಧಿಕಾರಿ ಕುಬೇರ್, ಉಪನ್ಯಾಸಕರಾದ ಯಶವಂತ್, ಸತೀಶ್, ವಸಂತ್, ಶಿವಕುಮಾರ್, ಸುನಿಲ್, ಬಸವರಾಜು, ಹರ್ಷಿತ, ಪ್ರತಾಪ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts