More

    ಸೇವಾ ಭಾವದಿಂದ ಕಾರ್ಯ ನಿರ್ವಹಿಸಿ

    ಶಿರಹಟ್ಟಿ: ಬಸವಾದಿ ಶರಣರ ತತ್ವ ಚಿಂತನೆ ಆಧುನಿಕ ಬದುಕಿಗೆ ಅಗತ್ಯವಾಗಿದ್ದು, ನಾವೆಲ್ಲರೂ ಅವುಗಳ ಪರಿಪಾಲನೆ ಮಾಡುವ ಅಗತ್ಯವಿದೆ. ದಿಟ್ಟತನದ ವ್ಯಕ್ತಿತ್ವ ಹೊಂದಿದ ಶಿವಶರಣೆ ಅಕ್ಕಮಹಾದೇವಿ ಇಡೀ ಮಹಿಳಾ ಕುಲಕ್ಕೆ ಆದರ್ಶರಾಗಿದ್ದು, ಅಂಥ ಶರಣೆಯ ಸ್ಮರಣೆಯಲ್ಲಿರುವ ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.

    ಶ್ರೀಮಠದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿರಹಟ್ಟಿ ತಾಲೂಕು ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳ ಸೇವಾ ದೀಕ್ಷೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಶ್ರೀಮಠದ ಉತ್ತರಾಧಿಕಾರಿ ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಶಿವಶರಣರಷ್ಟೇ ಶಿವಶರಣೆಯರು ಧಾರ್ವಿುಕ, ಆಧ್ಯಾತ್ಮಿಕವಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಕ್ಕಮಹಾದೇವಿಯವರ ಪಾತ್ರ ಚಿರಸ್ಮರಣೀಯ. ಅವರಲ್ಲಿನ ವೈರಾಗ್ಯ, ದಿಟ್ಟನಿಲುವು ಹಾಗೂ ವೈಚಾರಿಕ ಚಿಂತನೆ ಮನನ ಮಾಡಿಕೊಳ್ಳುವ ಮೂಲಕ ಅಸ್ತಿತ್ವಕ್ಕೆ ಬಂದಿರುವ ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಆಧ್ಯಾತ್ಮಿಕ, ಧಾರ್ವಿುಕವಾಗಿ ಸಮಾಜಮುಖಿ ಸೇವಾ ಚಿಂತನೆ ಕಾರ್ಯಗಳ ಮೂಲಕ ಹೊಸಮುನ್ನುಡಿ ಬರೆಯಲು ಸನ್ನದ್ಧರಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಸಾಪ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ, ತಾಲೂಕು ಶಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಶಸಾಪ ಮತ್ತು ಕದಳಿ ಮಹಿಳಾ ವೇದಿಕೆ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ ಎಂದರು. ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

    ಪ್ರಕಾಶ ನರಗುಂದೆ, ಎಚ್.ಎಂ. ದೇವಗಿರಿ, ಎಸ್.ಬಿ. ಮಹಾಜನಶೆಟ್ಟರ, ಡಾ. ಚಂದ್ರು ಲಮಾಣಿ, ಕಸಾಪ ತಾಲೂಕು ಅಧ್ಯಕ್ಷ ಎಸ್.ಬಿ. ಹೊಸೂರ, ಬಿ.ಎಸ್. ಹಿರೇಮಠ, ವೆಂಕಟೇಶ ಮಾತಾಡೆ, ಆಶ್ವಿನಿ ಅಂಕಲಕೋಟಿ, ಬಸವರಾಜ ಬೋರಶೆಟ್ಟರ, ಜಯಶ್ರೀ ಪಾಟೀಲ, ಸುಮಾ ಮಹಾಜನಶೆಟ್ಟರ, ಜಯಶ್ರೀ ನೂರಶೆಟ್ಟರ, ಭಾನುಮತಿ ಚನ್ನವೀರಶೆಟ್ಟರ, ರೇಣುಕಾ ಲಕ್ಕುಂಡಿ, ಗೀತಾ ಹಲಸೂರ, ರತ್ನ ಬದಿ, ಅಂಬಿಕಾ ಕಪ್ಪತ್ತನವರ, ಸುಮಾ ಬೋರಶೆಟ್ಟರ, ನಿರ್ಮಲಾ ಪಟ್ಟಣಶೆಟ್ಟಿ ಇತರರಿದ್ದರು.

    ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಂದಾ ಕಪ್ಪತ್ತನವರ ಸ್ವಾಗತಿಸಿದರು. ನೀಲಮ್ಮ ಕುಳಗೇರಿ, ಶಾಂತಾ ಪಾಟೀಲ ಅವರಿಂದ ವಚನಗಾಯನ ನಡೆಯಿತು. ಸಿದ್ದು ಹಲಸೂರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts