More

    ಸೇತುವೆ ಕೆಳಗೆ ಮಳೆ ನೀರು ಸಂಗ್ರಹ

    ರಾಣೆಬೆನ್ನೂರ: ತಾಲೂಕಿನ ಕೆರೆಮಲ್ಲಾಪುರ ಗ್ರಾಮದ ಸಮೀಪ ರಾಣೆಬೆನ್ನೂರ-ಗುತ್ತಲ ರಸ್ತೆಗೆ ಅಡ್ಡಲಾಗಿ ನಿರ್ವಿುಸಿದ ತುಂಗಾ ಮೇಲ್ದಂಡೆ ಯೋಜನೆಯ ಮೇಲ್ಸೇತುವೆ ಕೆಳಗೆ ಮಳೆ ನೀರು ಅಪಾರ ಪ್ರಮಾಣದಲ್ಲಿ ನಿಲ್ಲುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

    ಎರಡು ವರ್ಷಗಳ ಹಿಂದೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ವಣಕ್ಕಾಗಿ ಗ್ರಾಮದ ಸಮೀಪ ರಾಣೆಬೆನ್ನೂರ-ಗುತ್ತಲ ರಸ್ತೆಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ವಿುಸಲಾಗಿದೆ. ಆದರೆ, ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇದರಿಂದಾಗಿ ಈ ಮಾರ್ಗವಾಗಿ ದೇವರಗುಡ್ಡ, ಮೈಲಾರ, ಹೊನ್ನತ್ತಿ, ಗುತ್ತಲ, ಬಳ್ಳಾರಿ ಮೊದಲಾದೆಡೆ ಸಂಚರಿಸುವ ವಾಹನಗಳಿಗೆ ಹಾಗೂ ಗ್ರಾಮದ ರೈತರ ಎತ್ತಿನಬಂಡಿಗಳು, ಟ್ರ್ಯಾಕ್ಟರ್​ಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಈ ಮಾರ್ಗವಾಗಿ ಓಡಾಡಲು ಭಯಪಡುವಂತಾಗಿದೆ. ರಾತ್ರಿಯಂತೂ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದೆ ನೀರಿನ ಪ್ರಮಾಣ ಕಡಿಮೆಯಾಗುವವರೆಗೆ ಕಾಯುವ ಸ್ಥಿತಿಯಿದೆ. ನೀರು ನಿಲ್ಲುತ್ತಿರುವುದರಿಂದ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದೆ.

    ಮೇಲ್ಸೇತುವೆ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವಂತೆ ಯುಟಿಪಿ, ಪಿಡಿಬ್ಲ್ಯುಡಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಸ್ತೆ ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸೇತುವೆ ಕೆಳಗೆ ನೀರು ನಿಲ್ಲುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆ, ಯುಟಪಿ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಯಾರೂ ಸ್ಪಂದಿಸಿಲ್ಲ. ಪ್ರತಿವರ್ಷ ಮಳೆಗಾಲದಲ್ಲೂ ಜನತೆ ತೊಂದರೆ ಅನುಭವಿಸಬೇಕಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಈ ಕುರಿತು ಸೂಕ್ತ ಕ್ರಮ ಕೈಗೊಂಡು ರಸ್ತೆ ದುರಸ್ತಿ ಮಾಡಿಸಬೇಕು.

    | ಎಂ. ಮಹೇಶಪ್ಪ, ಕೆರೆಮಲ್ಲಾಪುರ ಗ್ರಾಮಸ್ಥ

    ಕೆರೆಮಲ್ಲಾಪುರ ಗ್ರಾಮದ ಬಳಿ ಯುಟಿಪಿ ಸೇತುವೆ ಕೆಳಗೆ ನೀರು ನಿಲ್ಲುತ್ತಿರುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸರಿಪಡಿಸಲಾಗುವುದು.

    | ಟಿ.ಆರ್. ಮಲ್ಲಾಡದ, ರಾಣೆಬೆನ್ನೂರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts