More

    ಸೆ.15-17 ಮಂಗಳೂರು ವಿವಿಯಲ್ಲಿ16ನೇ ಕನ್ನಡ ವಿಜ್ಞಾನ ಸಮ್ಮೇಳನ

    ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಭಾಗಿತ್ವದಲ್ಲಿ ಸೆ.15ರಿಂದ 17ರ ತನಕ ಸ್ವದೇಶಿ ವಿಜ್ಞಾನ ಆಂದೋಲನ ‘16ನೇ ಕನ್ನಡ ವಿಜ್ಞಾನ ಸಮ್ಮೇಳನ’ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

    ರಾಜ್ಯದ 300ಕ್ಕೂ ಅಧಿಕ ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವೈಜ್ಞಾನಿಕ ಲೇಖನ, ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಸ್ವದೇಶಿ ವಿಜ್ಞಾನ ಆಂದೋಲನದ ರಾಜ್ಯಾಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಮ್ಮೇಳನದಲ್ಲಿ ಮಂಡನೆಯಾಗುವ ಲೇಖನಗಳನ್ನು ಸಮ್ಮೇಳನದ ನಡಾವಳಿ ‘ವಿಜ್ಞಾನ ಕನ್ನಡ’ದಲ್ಲಿ ಮುದ್ರಿಸಲಾಗುವುದು. 2005ರಿಂದ ಪ್ರತಿವರ್ಷ ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15ರಿಂದ 17ರ ತನಕ ಆಯೋಜಿಸಲಾಗುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಂದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ಮತ್ತು ಅನ್ವೇಷಣಾಭಿವೃದ್ಧಿ ಸಂಸ್ಥೆಗಳ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಪಾರಂಪರಿಕ ಮತ್ತು ಆಧುನಿಕ ವಿಜ್ಞಾನದ ಎಲ್ಲ ಆಯಾಮಗಳ ವೈಜ್ಞಾನಿಕ ಲೇಖನಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಂಡಿಸಲು ಅವಕಾಶವಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

    ಸ್ವದೇಶಿ ವಿಜ್ಞಾನ ಆಂದೋಳನದ ಕರಾವಳಿ ಘಟಕ ಅಧ್ಯಕ್ಷ ಪ್ರೊ.ಎಂ.ಶಿವಪ್ರಕಾಶ್, ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್, ಸಂಚಾಲಕ ಪ್ರೊ.ಮಂಜುನಾಥ ಪಟ್ಟಾಭಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸ್ವದೇಶಿ ವಿಜ್ಞಾನ ಆಂದೋಲನ: ವಿಜ್ಞಾನ ಭಾರತಿ ಎಂಬ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯು ಕರ್ನಾಟಕದ ಘಟಕವಾಗಿ ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ ಎಂಬ ಸಂಸ್ಥೆಯು ರಾಜ್ಯದಲ್ಲಿ 2004ರಿಂದ ಕಾರ್ಯನಿರತವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವುದು ಸಂಸ್ಥೆಯ ಧ್ಯೇಯ. ಆಧುನಿಕ ವಿಜ್ಞಾನಗಳ ಜೊತೆಗೆ ಪಾರಂಪರಿಕ ವಿಜ್ಞಾನಗಳಾದ ಮನೋ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಯೋಗ, ವೈದ್ಯಕೀಯ ಪದ್ಧತಿ, ಕಲೆ, ಸಾಹಿತ್ಯ ಮತ್ತು ವಿಜ್ಞಾನಗಳ ಸಮ್ಮಿಳಿತ ಪ್ರಸರಣವೇ ಸ್ವದೇಶಿ ವಿಜ್ಞಾನ ಆಂದೋಲನದ ಉದ್ದೇಶ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts