More

    ಸೆಸ್ ಹೆಚ್ಚಳಕ್ಕೆ ವಿರೋಧ

    ಮುಂಡರಗಿ: ಎಪಿಎಂಸಿ ಮಾರುಕಟ್ಟೆ ಸೆಸ್ ಹೆಚ್ಚಿಸಿರುವುದನ್ನು ಖಂಡಿಸಿ ಡಿ.19ರಿಂದ ಅನಿದಿಷ್ಟಾವಧಿವರೆಗೆ ವ್ಯವಹಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ವರ್ತಕರ ಸಂಘದಿಂದ ಶುಕ್ರವಾರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

    ಶೇ.0.35 ರಷ್ಟಿದ್ದ ಸೆಸ್ ಅನ್ನು ಶೇ.1ಕ್ಕೆ ಹೆಚ್ಚಿಸಲಾಗಿದೆ. ಎಪಿಎಂಸಿ ಹೊರಗಡೆ ಮಾಲು ಖರೀದಿ ಮಾಡುವವರಿಗೆ ಯಾವುದೇ ಸೆಸ್ ಇರುವುದಿಲ್ಲ.ಹೀಗಾಗಿ ಎಪಿಎಂಸಿಯಲ್ಲಿನ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಇದನ್ನು ಖಂಡಿಸಿ ಡಿ.16ರಿಂದ ಹಲವೆಡೆ ಎಪಿಎಂಸಿ ಬಂದ್ ಮಾಡಲಾಗಿದೆ. ಹೀಗಾಗಿ ಡಿ.19ರಿಂದ ಅನಿರ್ದಿಷ್ಟಾವಧಿವರೆಗೆ ಮಾರುಕಟ್ಟೆ ವ್ಯವಹಾರ ಸ್ಥಗಿತಗೊಳಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಸಹಾಯಕ ಕಾರ್ಯದರ್ಶಿ ಎಂ.ಎಂ. ಪಟೇಲ್ ಅವರು ಮನವಿ ಸ್ವೀಕರಿಸಿದರು. ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ, ಕಾರ್ಯದರ್ಶಿ ವೆಂಕಟೇಶ ಹೆಗ್ಗಡಾಳ, ಗೌತಮಚಂದ್ ಚೋಪ್ರಾ, ನಾಗರಾಜ ಹೆಗ್ಗಡಾಳ, ಎಂ.ಎಸ್. ಶಿವಶೆಟ್ಟಿ, ಪ್ರಶಾಂತ ತಾವರಗೇರಿ, ಪವನ ಚೋಪ್ರಾ, ಈರಣ್ಣ ಮೇಟಿ, ಖಾಸೀಂಸಾಬ್ ಹರಿವಾಣ, ವೀರೇಶ ಗೋಡಿ, ಶ್ರೀನಿವಾಸ ಹೆಗ್ಗಡಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts