More

    ಸೂರು ಹಂಚಿಕೆಗೆ ಮೀನ-ಮೇಷ

    ಮೃತ್ಯುಂಜಯ ಕಲ್ಮಠ ಗದಗ

    ಗದಗ ನಗರದ ಗಂಗಿಮಡಿ ಪ್ರದೇಶದ ಬಳಿ 75 ಎಕರೆ ಜಾಗದಲ್ಲಿ ಸರ್ವರಿಗೂ ಸೂರು ಯೋಜನೆಯಡಿ ನಿರ್ವಿುಸಿರುವ 3637 ಗುಂಪು ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದೀಗ ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಬೇರೊಂದು ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಲಾಗುವುದೇ ಎಂಬ ಜಿಜ್ಞಾಸೆ ಅವಳಿನಗರದಲ್ಲಿ ಶುರುವಾಗಿದೆ.

    ಅಲ್ಲದೆ, ಮನೆಗಳ ಹಂಚಿಕೆ ವಿಷಯದಲ್ಲಿ ಉಂಟಾಗಿರುವ ಗೊಂದಲ ಇದೀಗ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಆಡಳಿತಕ್ಕೆ ಸವಾಲಾಗಿದೆ. ಇದರಿಂದ ಫಲಾನುಭವಿಗಳ ಇನ್ನೆಷ್ಟು ತಿಂಗಳು ಕಾಯಬೇಕು ಎಂದು ಪ್ರಶ್ನಿಸುವಂತಾಗಿದೆ.

    ನಗರದ ಗಂಗಿಮಡಿ ಪ್ರದೇಶದಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ವಿುಸಲಾಗಿದೆ. ನಿಗಮದ ನಿಯಮಾವಳಿ ಪ್ರಕಾರ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮನೆಗಳನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಗುಂಪು ಮನೆಗಳ ಭೂಮಿ ಪೂಜೆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದರು ಎಂಬ ಮಾತಿದೆ. ಹೀಗಾಗಿ, ಮನೆ ಹಂಚಿಕೆ ವಿಷಯ ಗೊಂದಲದ ಗೂಡಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts