More

    ಸುಸಂಸ್ಕೃತರಾಗಿ ಬೆಳೆಯಿರಿ

    ಎಚ್.ಡಿ.ಕೋಟೆ: ಸರ್ಕಾರಿ ಶಾಲೆಯಲ್ಲಿ ಕಲಿತಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯ ಎಂದು ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ತಿಳಿಸಿದರು.

    ತಾಲೂಕಿನ ಬೆಳಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೊದಲ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ ಬೆಳೆದು ತಂದೆ ತಾಯಿಗೆ ಗೌರವ ಕೊಡುವುದನ್ನು ಕಲಿಯುತ್ತಾರೆ ಎಂದರು.

    ಸಮಾಜ ಸೇವಕ ಜಿ.ಎನ್.ದೇವದತ್ತ ಮಾತನಾಡಿ, ಒಬ್ಬ ಗುರು ಎಂದಿಗೂ ಶಿಷ್ಯನ ಕೇಡನ್ನು ಬಯಸುವುದಿಲ್ಲ, ಆತ ಕೇಡನ್ನು ಬಯಸಿದರೆ ಗುರುವೇ ಅಲ್ಲ. ಸಮಾಜದಲ್ಲಿ ಒಮ್ಮೊಮ್ಮೆ ಕೆಟ್ಟ ತಂದೆ, ತಾಯಿ ಇದ್ದರೂ ಇರಬಹುದು. ಆದರೆ ಕೆಟ್ಟ ಗುರು ಇರುವುದಿಲ್ಲ, ಆದ್ದರಿಂದ ಗುರುವಿನ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಸಮಾಜ ಸೇವಕ ದೊರೆಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಮಾತನಾಡಿದರು. ಶಾಲಾ ಮಕ್ಕಳು ಜಾನಪದ, ಚಿತ್ರಗೀತೆಗಳಿಗೆ ನೃತ್ಯ ಹಾಗೂ ‘ಜುಗ್ಗಾ ಸ್ವಾಮಿ ಜುಗ್ಗಾ’ ಎಂಬ ಹಾಸ್ಯ ನಾಟಕ ಪ್ರದರ್ಶಿಸಿದರು.

    ಸವ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ, ಸದಸ್ಯರಾದ ಸೋಮೇಶ್, ಶಶಿರೇಖಾ ಭೈರೇಗೌಡ, ಸಣ್ಣಮ್ಮ, ಚಿಕ್ಕಮ್ಮ, ಬಾಬು, ವಣಕಾರ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್, ಸದಸ್ಯರಾದ ಲೋಕೇಶ್, ವೆಂಕಟೇಶ್, ಮಲ್ಲಿಕಾರ್ಜುನ, ಭೈರೇಗೌಡ, ಶಿವಲಿಂಗೇಗೌಡ, ಸತೀಶ್, ಶಿಕ್ಷಕರಾದ ಜಿ.ಸುರೇಶ್, ಬಾಲಸುಬ್ರಹ್ಮಣ್ಯ, ಹೇಮಲತಾ, ಸೌಮ್ಯ, ರೇಷ್ಮಾ ಫರ್ವೀನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts