More

    ಸುಲಭ ಜೀವಿಗಳಾಗಿ ವಿದ್ಯಾರ್ಥಿಗಳ ಪರಿವರ್ತನೆ: ಪ್ರಸನ್ನ ಹೆಗ್ಗೋಡು

    ಮೈಸೂರು: ವಿಶ್ವವಿದ್ಯಾಲಯಗಳು ಶ್ರಮ ಜೀವಿಗಳನ್ನು ಸುಲಭ ಜೀವಿಗಳಾಗಿ ಮತಾಂತರಗೊಳಿಸುತ್ತಿವೆ ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕಳವಳ ವ್ಯಕ್ತಪಡಿಸಿದರು.


    ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯಿಂದ ನಗರದ ಎನ್‌ಎಸ್‌ಎಸ್ ಭವನದಲ್ಲಿ ಸೋಮವಾರ ಆಯೋಜಿ ಸಿದ್ದ 2020-21ನೇ ಸಾಲಿನ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಜಗತ್ತಿನಲ್ಲಿ ಸುಲಭ ಜೀವಿಗಳು ಮತ್ತು ಶ್ರಮಜೀವಿಗಳು ಎಂಬ ಎರಡು ಜಾತಿಗಳು ಮಾತ್ರ ಇವೆ. ಆದರೆ, ನಾವು ನೂರಾರು ಜಾತಿ ಗಳನ್ನು ಕಟ್ಟಿಕೊಂಡು ಕಿತ್ತಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಇನ್ನಿತರ ಜ್ಞಾನ ಸೌಲಭ್ಯ ನೀಡಿ ಸುಲಭ ಜೀವಿಗಳಾಗಿ ಪರಿವರ್ತನೆ ಮಾಡಲಾಗಿದೆ. ಇದು ತಪ್ಪು. ಆದರೆ, ಹಳೇ ಆಚರಣೆ, ಸಂಸ್ಕೃತಿ, ಭಾಷೆ ಕಡೆಗೆ ಮತಾಂ ತರಗೊಂಡ ಸುಲಭಜೀವಿಗಳು ತಿರುಗಿಯೂ ನೋಡಲ್ಲ. ಇವರನ್ನೂ ಇನ್ನಷ್ಟು ದೂರೀಕರಿಸುವ ಕೆಲಸವನ್ನು ವಿವಿಗಳೇ ಮಾಡುತ್ತಿವೆ ಎಂದರು.

    ವಿದೇಶಕ್ಕೆ ಮತ್ತು ಅಭಿವೃದ್ಧಿ ಹೊಂದಿರುವ ನಗರಗಳಿಗೆ ಗುಳೆ ಹೋಗುವ ಯುವಜನರನ್ನು ವಿಶ್ವವಿದ್ಯಾಲಯಗಳು ತಯಾರು ಮಾಡುತ್ತಿವೆ. ಇದು ಸರಿಯಲ್ಲ. ಹಳ್ಳಿ ಜನರು ಹಳ್ಳಿಯಲ್ಲೇ ಉಳಿಯುವಂತಾಗಬೇಕು. ಅಲ್ಲೇ ಸ್ವಾವಲಂಬಿಯಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕೆಲಸವನ್ನು ಮಾಡಬೇಕು.
    ಪ್ರಸನ್ನ ಹೆಗ್ಗೋಡು  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts