More

    ಸುರಕ್ಷಿತ ಜಾಗ ಮಂಜೂರು ಮಾಡಿ

    ಬೆಳಗಾವಿ: ಅತಿವೃಷ್ಟಿಯಿಂದ 2021-22ನೇ ಸಾಲಿನಲ್ಲಿ ಹಾನಿಗೊಂಡ ಮನೆಗಳ ಮರು ನಿರ್ಮಾಣ ಕಾರ್ಯ ಕೂಡಲೇ ಪ್ರಾರಂಭಿಸಲು ಸುರಕ್ಷಿತ ಜಾಗ ಒದಗಿಸುವಂತೆ ಒತ್ತಾಯಿಸಿ ಖಾನಾಪುರ ತಾಲೂಕಿನ ಲೋಂಡಾ ಸಂತ್ರಸ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ಲೋಂಡಾದಲ್ಲಿ ಒಂದೆಡೆ ರೈಲ್ವೆ ನಿಲ್ದಾಣ ಮತ್ತೊಂದೆಡೆ ನದಿ ಇದ್ದು, ನಡುವಿನ ಗಾಂಧಿನಗರದಲ್ಲಿ ನಾವೆಲ್ಲ ವಾಸವಿದ್ದೇವೆ. ಮನೆಗಳು ಬಿದ್ದ ಸಂದರ್ಭದಲ್ಲಿ ಈ ಸ್ಥಳದಿಂದ ಬೇರೆ ಕಡೆ ಸ್ಥಳಾಂತರಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದೆವು. ಈವರೆಗೂ ಶಾಶ್ವ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಿ ವರ್ಷವೂ ಪದೇ ಪದೆ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಸಾಕಷ್ಟು ತೊಂದರೆ ಆಗುತ್ತಿದೆ. ಈ ಬಾರಿಯೂ ಪಾಂಡರಿ ನದಿಯ ಪ್ರವಾಹದಿಂದ ಸಾಕಷ್ಟು ಮನೆಗಳು ಬಿದ್ದಿವೆ. ಆದ್ಧರಿಂದ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ವಸತಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಆದರೆ, ಇತ್ತೀಚೆಗೆ ಖಾನಾಪೂರ ತಹಸೀಲ್ದಾರ್ ಸಂತ್ರಸ್ತರಿಗೆಲ್ಲ ನೋಟಿಸ್ ನೀಡಿದ್ದು, ‘ನ.27ರ ಒಳಗಾಗಿ ಮನೆ ನಿರ್ಮಾಣದ ಪ್ರಗತಿ ತೋರಿಸಬೇಕು. ಇಲ್ಲವಾದರೆ, ಮಂಜೂರು ಮಾಡಿದ್ದ ಐದು ಲಕ್ಷ ರದ್ದು ಮಾಡಲಾಗುವುದು. ಅದೇ ರೀತಿ ಈಗಾಗಲೇ ವಿತರಿಸಿರುವ ಒಂದು ಲಕ್ಷ ರೂಪಾಯಿ ವಾಪಸ್ಸು ಪಡೆಯುತ್ತೇವೆ’ ಎಂದಿದ್ದಾರೆ. ನಮಗೆ ಮನೆ ನಿರ್ಮಾಣವಾಗಿಲ್ಲ. ಆದರೆ, ಅದೇ ಜಾಗದಲ್ಲಿ ನಿರ್ಮಿಸಿಕೊಂಡರೆ ಮುಂದಿನ ವರ್ಷವೂ ಮತ್ತೆ ಪ್ರವಾಹಕ್ಕೆ ಹಾನಿ ಅನುಭವಿಸಲೇ ಬೇಕು. ಹೀಗಾಗಿ, ಬೇರೆಡೆ ಸುರಕ್ಷಿತ ಜಾಗದಲ್ಲಿ ಮನೆ ಕಟ್ಟಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ರಾಮ ಹೊಸಮನಿ, ಸತ್ಯ ಹೊಸಮನಿ, ರಜಿಯಾ ಪಠಾಣ, ಮುನೇರಾ ಪಠಾಣ, ಸಿಂಧು ಜಟಗೇಕರ, ಲಕ್ಷ್ಮೀ ತಳವಾರ, ಯಲ್ಲವ್ವ ತಮ್ಮನ್ನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts