More

    ಸುಗ್ಗಿ ಹಬ್ಬಕ್ಕೆ ಜಿಲ್ಲೆ ಸಜ್ಜು

    ಹಾಸನ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಜಿಲ್ಲಾದ್ಯಂತ ಮನೆ ಮಾಡಿದ್ದು, ಜನತೆ ಶನಿವಾರ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ ಖರೀದಿಸಿದರು.


    ನಗರದ ಹೃದಯ ಭಾಗವಾದ ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಬ್ಬದ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಬೆಳಗಿನಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ ಜನತೆ, ಬೆಲೆ ಏರಿಕೆ ಬಿಸಿ ನಡುವೆಯೂ ಹಬ್ಬಕ್ಕೆ ಅಗತ್ಯವಾದ ಎಳ್ಳು-ಬೆಲ್ಲ, ಅವರೆಕಾಯಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಸಿದರು.


    ಮಿಕ್ಸ್ ಎಳ್ಳು ಬೆಲ್ಲ ಅರ್ಧ ಕೆಜಿ 100 ರೂ. , ಅವರೆಕಾಯಿ ಒಂದು ಕೆಜಿಗೆ 70 ರಿಂದ 100 ರೂ. ಗಳಿತ್ತು. ಜೋಡಿ ಕಬ್ಬಿಗೆ 60 ರಿಂದ 100 ರೂ., ಪುಟ್ಬಾಳೆ ಒಂದು ಕೆಜಿಗೆ 80 ರಿಂದ 120 ರೂ., ಮಾವಿನ ಸೊಪ್ಪು ಒಂದು ಕಟ್ಟಿಗೆ 20 ರೂ., ಸೇಬು ಕೆಜಿಗೆ 100 ರಿಂದ 120 ರೂ., ದಾಳಿಂಬೆ ಕೆಜಿ 160 ರೂ., ದ್ರಾಕ್ಷಿ ಕೆಜಿ 100 ರೂ ., ಸೀಬೆಹಣ್ಣು ಕೆಜಿ 80 ರೂ .,ಸುಗಂಧರಾಜ ಹೂವಿನ ಹಾರ 100 ರೂ. ಗುಲಾಬಿ ಕೆಜಿ 300 ರೂ., ಒಂದು ಮಾರು ಕಾಕಡ ಹೂ 80 ರೂ., ಕನಕಾಂಬರ 100 ರೂ., ತುಳಸಿ 70 ರೂ. ಹಾಗೂ ಸೇವಂತಿಗೆ 60 ರೂ.ರಿಂದ 100 ರೂ.ಗಳವರೆಗೆ ಇತ್ತು.


    ರೈತರು ರಾಸುಗಳನ್ನು ಕಿಚ್ಚು ಹಾಯಿಸುವುದು ಈ ಹಬ್ಬದ ವಿಶೇಷವಾಗಿದೆ. ಹೀಗಾಗಿ ಎತ್ತುಗಳನ್ನು ಸಿಂಗರಿಸಲು ಕಪ್ಪು ಹುರಿ, ಹಗ್ಗ, ಮೂಗುದಾರ, ಗೆಜ್ಜೆ-ಗೌಸ, ಬಾಸಿಂಗ, ಕೊಂಬಿನ ಕಳಸ, ಬತಾಸು, ಗುಲಾಮ್‌ಪಟ್ಟೆ, ಕೊಂಬಿನ ಬಣ್ಣ, ಟೇಪು, ಹೂವಿನ ಕುಚ್ಚು, ಬಲೂನು ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts