More

    ಸೀಲ್ ಇದ್ದರೆ ಕರೊನಾ ಇದೆಯೆಂದಲ್ಲ

    ಕಾರವಾರ: ಹೊರಗಿನಿಂದ ಬಂದ ಎಲ್ಲರಿಗೂ ಕ್ವಾರಂಟೈನ್ ಸೀಲ್ ಹಾಕಬೇಕು ಎಂದಿಲ್ಲ. ಸೀಲ್ ಹಾಕಿದ ಎಲ್ಲರಲ್ಲೂ ಕರೊನಾ ಇದೆ ಎಂದಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸ್ಪಷ್ಟಪಡಿಸಿದ್ದಾರೆ.

    ವಲಸೆ ಕಾರ್ವಿುಕರನ್ನು ಅವರ ತವರಿಗೆ ಬಿಟ್ಟು ಬಂದ ಕಾರವಾರ, ಅಂಕೋಲಾ ಎನ್​ಡಬ್ಲ್ಯುಕೆಆರ್​ಟಿಸಿ ಘಟಕಗಳ ಸಿಬ್ಬಂದಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

    ಯಾರಿಗೆ ಕ್ವಾರಂಟೈನ್ ಸೀಲ್ ಹಾಕಬೇಕು ಎಂಬುದು ಪ್ರತಿ ತಾಲೂಕಿನಲ್ಲಿ ತೆರೆದ ಜ್ವರ ಪರೀಕ್ಷಾ ಕೇಂದ್ರದಲ್ಲಿ ನಿರ್ಧಾರವಾಗಬೇಕು. ನಾವು ಸಾಮಾನ್ಯವಾಗಿ ಹೊರ ದೇಶದಿಂದ ಬಂದವರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಮಾಡಲು, ಗಂಟಲ ದ್ರವದ ಮಾದರಿ ಪಡೆಯಲು ನಿರ್ಧರಿಸಿದ್ದೇವೆ. ಹೊರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಇನ್ನು ರಾಜ್ಯದ ಇತರ ಕೆಂಪು ವಲಯದ ಜಿಲ್ಲೆಯಿಂದ ಬಂದವರಿಗೂ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ.

    ಸರ್ಕಾರಿ ಕರ್ತವ್ಯ ನಿರತ ಸಿಬ್ಬಂದಿ, ಅಧಿಕಾರಿಗಳಿಗೆ ಹಾಕುತ್ತಿಲ್ಲ ಅವರನ್ನು ಮತ್ತೆ ಮತ್ತೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿದ್ದೇವೆ ಎಂದು ವಿವರಿಸಿದರು.

    ಈ ವೇಳೆ ಕರೊನಾ ಕಾಲದಲ್ಲಿ ಕರ್ತವ್ಯ ನಿರ್ವಹಿಸಿದ ಕಾರವಾರ ಘಟಕದ ಉಮೇಶ ನಾಯ್ಕ, ಈಶ್ವರ ಜಿ.ನಾಯ್ಕ, ಗಜು ಗೌಡ, ಲಕ್ಷ್ಮೀಧರ ಹೊಸಕಟ್ಟಿ, ಎಂ.ಎಲ್.ನಾಯ್ಕ, ಸುಧೀರ ನಾಯ್ಕ ಮಂಜುನಾಥ ಬೀಸನಳ್ಳಿ, ಸ್ಟಿಫನ್ ಫರ್ನಾಂಡಿಸ್, ಏಕನಾಥ ಕೊಳಂಬಕರ್, ಸತೀಶ ನಾಯ್ಕ, ಅರವಿಂದ ರಾಠೋಡ, ಎಚ್.ಎಂ.ನಾಯ್ಕ, ಅಂಕೋಲಾ ಘಟಕದ ದಿನೇಶ ನಾಯ್ಕ, ದಿಲೀಪ ಜೆ., ಜೀವನ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರವಾಡ ಘಟಕ ವ್ಯವಸ್ಥಾಪಕ ರವೀಂದ್ರ ಫಾತರಫೇಕರ, ಅಂಕೋಲಾ ಘಟಕ ವ್ಯವಸ್ಥಾಪಕ ಯುಗಾ ಬಾನಾವಳಿಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts