More

    ಸಿಬಿಐ ಅಧಿಕಾರಿಗಳಿಂದ ರಾಜಕೀಯ ಮುಖಂಡರ ವಿಚಾರಣೆ

    ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ನಗರದಲ್ಲಿ ಗುರುವಾರ ಸತತ 2ನೇ ದಿನವೂ ಹಲವರನ್ನು ವಿಚಾರಣೆಗೆ ಒಳಪಡಿಸಿದರು.

    ಉಪನಗರ ಠಾಣೆಗೆ ಆಗಮಿಸುವಂತೆ ಅಧಿಕಾರಿಗಳು ಯೋಗೀಶಗೌಡ ಕುಟುಂಬದವರು ಹಾಗೂ ರಾಜಕೀಯ ಮುಖಂಡರಿಗೆ ನೋಟಿಸ್ ನೀಡಿದ್ದರು. ಅದರಂತೆ ಯೋಗೀಶಗೌಡರ ಪತ್ನಿ ಮಲ್ಲಮ್ಮ, ಸಹೋದರ ಗುರುನಾಥಗೌಡ, ಮಲ್ಲಮ್ಮ ಸೋದರಿ ಸುಮಾ, ಕಾಂಗ್ರೆಸ್ ಮುಖಂಡರಾದ ನಾಗರಾಜ ಗೌರಿ ಹಾಗೂ ಪ್ರಶಾಂತ ಕೇಕರೆ ಮತ್ತು ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು ಠಾಣೆಗೆ ಹಾಜರಾಗಿ ವಿಚಾರಣೆಗೊಳಪಟ್ಟರು.

    ಮೊದಲಿಗೆ ಯೋಗೀಶಗೌಡ ಪತ್ನಿ ಮಲ್ಲಮ್ಮ, ಶಿವಾನಂದ ಕರಿಗಾರ ಅವರನ್ನು ವಿಚಾರಣೆಗೊಳಪಡಿಸಲಾಯಿತು. ನಂತರ ಗುರುನಾಥಗೌಡ ಗೌಡರ, ನಾಗರಾಜ ಗೌರಿ ಹಾಗೂ ಪ್ರಶಾಂತ ಕೇಕರೆ ಅವರನ್ನು ಠಾಣೆಗೆ ಕರೆಸಿದ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿತು. 4

    ಬಾಕ್ಸ್​ಗಳಲ್ಲಿದ್ದ ದಾಖಲೆಗಳನ್ನು ಕಾರ್​ನಲ್ಲಿ ತರಿಸಿಕೊಂಡ ಅಧಿಕಾರಿಗಳು, ಹಲವರಿಂದ ಮಾಹಿತಿ ಪಡೆದರು. ಸಂಜೆ 4.10ರ ಸುಮಾರಿಗೆ ಮಲ್ಲಮ್ಮ ಹಾಗೂ ಇತರರ ವಿಚಾರಣೆ ಮುಗಿಸಿ ಹೊರಗೆ ಕಳುಹಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಗುರುನಾಥಗೌಡ ‘ನನ್ನನ್ನೇನೂ ಕೇಳಿಲ್ಲ. ಕುಟುಂಬ ಸದಸ್ಯರೊಂದಿಗೆ ಬಂದಿದ್ದೆ’ ಎಂದರು. ಶಿವಾನಂದ ಕರಿಗಾರ ಪ್ರತಿಕ್ರಿಯಿಸಿ ‘ಹಿಂದೆ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾದ ಕುರಿತು ಮಾಹಿತಿ ಪಡೆದರು’ ಎಂದರು. ಸಂಜೆ 6 ಗಂಟೆ ಸುಮಾರಿಗೆ ಕಾಂಗ್ರೆಸ್ ಮುಖಂಡರಾದ ನಾಗರಾಜ ಗೌರಿ ಹಾಗೂ ಪ್ರಶಾಂತ ಕೇಕರೆ ಠಾಣೆಯಿಂದ ಹೊರಬಂದರು. ಬಳಿಕ ಪ್ರತಿಕ್ರಿಯಿಸಿದ ನಾಗರಾಜ ಗೌರಿ, ‘ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾದ ಕುರಿತು ಮಾತ್ರ ಮಾಹಿತಿ ಕೇಳಿದರು’ ಎಂದರು.ಬೆಳಗ್ಗೆ 11 ಗಂಟೆಯಿಂದ ಸಂಜೆ 6ರವರೆಗೆ ಹಲವರ ವಿಚಾರಣೆ ನಡೆದಿದ್ದು, ಇನ್ನೂ ಕೆಲವರ ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts