More

    ಸಿದ್ದರಾಮಯ್ಯಗೆ ಅಧಿಕಾರದ ಮದವೇರಿದೆ,ಎಂಎಲ್‌ಸಿ ಆಕ್ರೋಶ


    ಚಿತ್ರದುರ್ಗ: ವಿಧಾನಸೌಧ ವರ್ಗಾವಣೆ ದಂಧೆ ನಡೆಸುವ ಸಂತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಸಮಾಧಾನ ವ್ಯಕ್ತಪಡಿಸಿದ ರು.ವಿಧಾನಸಭೆಯಲ್ಲಿ ಬಿಜೆಪಿಯ 10 ಸದಸ್ಯರ ಅಮಾನತು ಖಂಡಿಸಿ,ನಗರದ ವೀರವನಿತೆ ಒನಕೆ ಓಬವ್ವ ಸರ್ಕಲ್‌ನಲ್ಲಿ ಶನಿವಾರ ಬಿಜೆಪಿ ಕಾರ‌್ಯ ಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಹಿಂದೆಂದೂ ಕಾಣದಂಥ ರೀತಿಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ. ಪ್ರತಿ ತಾಲೂಕಿನಿಂದ 10-20 ಅಧಿಕಾರಿಗಳ ಹೋಲ್ ಸೇಲ್ ವರ್ಗಾವಣೆ ನೋಡಿದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜ್ಯಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದೆಂಬುದು ಸಾಬೀತಾ ಗಿದೆ.

    ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಮದವೇರಿದೆ,ಸದನದಲ್ಲಿ ಚರ್ಚೆ ಬದಲು ಕೈ ಪಕ್ಷದ ಹೈಕಮಾಂಡ್‌ನ್ನು ಮೆಚ್ಚಿಸಲು ಪ್ರಧಾನಿ ನರೇ ಂದ್ರ ಮೋದಿ ಅವರನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಈಚಿನ ಹಲವು ಹತ್ಯೆ ಘಟನೆಗ ಳನ್ನು ಪ್ರಸ್ತಾಪಿಸಿದರು.

    ಈಚೆಗೆ ಬೆಂಗಳೂರಲ್ಲಿ ಸೆರೆ ಸಿಕ್ಕಿರುವ ಶಂಕಿತ ಉಗ್ರರ ಮನೆಯಲ್ಲಿ ಸ್ಫೋಟಕ ವಸ್ತುಗಳು,ಶಸ್ತ್ರಾಸ್ತ್ರಗಳು ದೊರಕಿದರೂ ಅವರನ್ನು ಈಗಲೇ ಉಗ್ರರೆನ್ನಲು ಸಾಧ್ಯವಿಲ್ಲವೆಂದು ಗೃಹಮಂತ್ರಿ ಪರಮೇಶ್ವರ್ ಹೇಳುತ್ತಾರೆ. ಅವರು ನಮ್ಮ ಸಹೋದರರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆಯುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸಿದ್ದರಾಮಯ್ಯ ಸರ್ಕಾರದ ದುರಾಳಿಡತ ಖಂಡಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ.

    ರಾಜಕೀಯ ಸಭೆಗಳಿಗೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿರುವುದು ದುರಂತ. ದಲಿತರಿಗೆಂದು ಮೀಸಲಿದ್ದ ಅನುದಾನವನ್ನು ಗ್ಯಾರಂಟಿ ಗಳಿಗೆ ವಿನಿಯೋಗಿಸುವ ಮೂಲಕ ಈ ಸರ್ಕಾರ ದಲಿತ ವಿರೋಧಿ ಅನುಸರಿಸುತ್ತಿದೆ ಎಂದು ಆಪಾದಿಸಿದರು.

    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ,ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಏಕಪಕ್ಷೀಯ ನಿಲುವನ್ನು ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ಔತಣಕೂಟದಲ್ಲಿ ಭಾಗಿಯಾಗುವ ಮೂಲಕ ಸ್ಪೀಕರ್ ಎಂಬ ಸಾಂವಿಧಾನಕ ಹುದ್ದೆಗೆ ಅಗೌರವ ಉಂಟು ಮಾಡಿದ್ದಾರೆ ಎಂದರು.

    ಕುಡಾ ಮಾಜಿ ಅಧ್ಯಕ್ಷ ಸುರೇಶ್‌ಸಿದ್ದಾಪುರ,ಜಯಪಾಲಯ್ಯ,ಡಿ.ಕೆ.ಜಯಣ್ಣ,ವೆಂಕಟೇಶ್‌ಯಾದವ್,ರೇಖಾ,ಕಿರಣ್,ಶಂಭು,ಯಶವಂತ್,ವೀ ರೇಶ್‌ ಜಾಲಿಕಟ್ಟೆ,ಕಲ್ಲೇಶಯ್ಯ,ವಿಜಯಣ್ಣ ಸೂರನಹಳ್ಳಿ,ಹರೀಶ್,ತಿಮ್ಮಣ್ಣ,ಸಂತೋಷ್,ಬಸಮ್ಮ,ಭಾರ್ಗವಿದ್ರಾವಿಡ,ವೀಣಾಬಾಯಿ,ಪಾಂಡು,ಶಿವ ಪ್ರಕಾಶ್‌ದಗ್ಗೆ,ನಾಗರಾಜ್‌ಬೇದ್ರೆ,ಸಂತೋಷ್,ಸಂಪತ್,ಕೆ.ಮಲ್ಲಿಕಾರ್ಜುನ್,ಹರೀಶ್,ತಿಮ್ಮಣ್ಣ,ಚಂದ್ರು,ನರೇಂದ್ರ ಹೊನ್ಯಾಳ್,ಶಿವಣ್ಣಾಚಾರ್ ಮತ್ತಿತರ ಬಿಜೆಪಿ ಮುಖಂಡರು,ಕಾರ‌್ಯಕರ್ತರು ಇದ್ದರು.


    ಯಾವ ಅಭಿಪ್ರಾಯವೂ ಇಲ್ಲ
    ಚಿತ್ರದುರ್ಗ:ಸ್ಪೀಕರ್ ನಡೆ ಖಂಡಿಸಿ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿ ಹಾಕಿದ್ದರೆ ಹೊರತು ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಬೇಕೆಂಬ ಯಾವ ಅಭಿಪ್ರಾಯವೂ ಪಕ್ಷದೊಳಗೆ ವ್ಯಕ್ತವಾಗಿಲ್ಲವೆಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿಪಕ್ಷ ನಾಯಕನ ಆಯ್ಕೆ ಕುರಿತಂತೆ ನಮ್ಮ ಹೈ ಕಮಾಂಡ್‌ಗೆ ವರದಿ ಸಲ್ಲಿಕೆಯಾಗಿದ್ದು, 66 ಬಿಜೆಪಿ ಶಾಸಕರಲ್ಲಿ ಒಬ್ಬರು ಪ್ರತಿಪಕ್ಷ ನಾಯಕರಾಗುತ್ತಾರೆ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts