More

    ಸಿಡಿಲು ಬಡಿದು ಐದು ಆಡು ಸಾವು

    ಮುಂಡರಗಿ: ಸಿಡಿಲು ಬಡಿದು 5 ಆಡುಗಳು ಸಾವನ್ನಪ್ಪಿದ ಘಟನೆ ಮಂಗಳವಾರ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಜರುಗಿದೆ. ಆಡುಗಳು ಚನ್ನಪ್ಪ ದಂಡಿನ ಎಂಬುವರಿಗೆ ಸೇರಿವೆ. ಸ್ಥಳಕ್ಕೆ ಡಂಬಳ ಕಂದಾಯ ನಿರೀಕ್ಷಕ ಎಂ.ಎ. ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ಉತ್ತಮವಾಗಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಬಿದರಹಳ್ಳಿ, ವಿಠಲಾಪೂರ ಸೇರಿ ವಿವಿಧ ಗ್ರಾಮಗಳಲ್ಲಿ ಗಿಡ-ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ಮೊದಲಾದ ಗ್ರಾಮಗಳಲ್ಲಿ ಬಿರುಗಾಳಿ ಮಳೆಗೆ ಮರಗಳು ಉರುಳಿದ್ದು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಜಮೀನುಗಳ ಬದುವುಗಳಲ್ಲಿ ಮಳೆ ನೀರು ನಿಂತಿದೆ.

    ಮಳೆಗೆ ಪಟ್ಟಣದ ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತಿದ್ದು ಕಂಡು ಬಂತು. ಮಳೆ ನೀರಿನ ರಭಸಕ್ಕೆ ಕೆಲವು ಕಡೆ ಚರಂಡಿ ಗಲೀಜು ಕೊಚ್ಚಿ ಹೋಯಿತು. ಅಂಬಾಭವಾನಿ ದೇವಸ್ಥಾನದ ಮುಖ್ಯರಸ್ತೆಯು ಎತ್ತರವಾಗಿರುವುದರಿಂದ ಮತ್ತು ಫುಟ್​ಪಾತ್, ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ಮತ್ತು ಕೆಲ ಕಿರು ರಸ್ತೆಯುದ್ದಕ್ಕೂ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು. ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದ್ದರಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳಲು ಮತ್ತು ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳಲು ಅನುಕೂಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts