ಸಿಡಿಲಿಗೆ ತಂದೆ ಮಗ ಬಲಿ

IMG-20221012-WA0062
Published on

ಸೇಡಂ (ಕಲಬುರಗಿ) : ತಾಲೂಕಿನ ಮುಧೋಳ ಸಮೀಪದಲ್ಲಿರುವ ಪಿಲ್ಲಿಗುಂಡಾ ತಾಂಡದ ತಂದೆ ಮಗ ಬುಧವಾರ ಸಿಡಿಲಿಗೆ ಬಲಿಯಾಗಿದ್ದಾರೆ.
ತಮ್ಮ ಸ್ವಂತ ಜಮೀನಿನಲ್ಲಿ ಸೇಂಗಾ ಬಿತ್ತಲು ಹೋಗಿದ್ದರು ಎನ್ನಲಾಗಿದೆ. ಮಳೆ ಬರುವಾಗ ಆಶ್ರಯಕ್ಕಾಗಿ ಗಿಡದ ಕೆಳಗೆ ತಂದೆ ತುಳಸ್ಯಾನಾಯಕ(50) ಮಗ ಅವಿಲ್ (16) ನಿಂತಿದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net