More

    ಸಿಂಗಾನಲ್ಲೂರಲ್ಲಿ ಸುಟ್ಟು ಕರಕಲಾದ ಪೆಟ್ಟಿಗೆ ಅಂಗಡಿ

    ಕೊಳ್ಳೇಗಾಲ: ತಾಲೂಕಿನ ಸಿಂಗಾನಲ್ಲೂರು ಗ್ರಾಮದ ಅರಳಿ ಮರದ ಬೀದಿಯಲ್ಲಿ ಶುಕ್ರವಾರ ಗ್ಯಾಸ್ ಸಿಲಿಂಡರ್ ದಿಢೀರ್ ಸ್ಫೋಟಗೊಂಡ ಪರಿಣಾಮ ಪೆಟ್ಟಿಗೆ ಅಂಗಡಿ ಸಂಪೂರ್ಣ ಕರಕಲಾಗಿದೆ.
    ಗ್ರಾಮದ ಸೋಮಣ್ಣ ಅವರ ಅಂಗಡಿ ಸುಟ್ಟು ಭಸ್ಮವಾಗಿದ್ದು, ಅಂಗಡಿ ಮಾಲೀಕ ಪವಾಡ ರೀತಿಯಲ್ಲಿ ಅವಘಡದಿಂದ ಪಾರಾಗಿದ್ದಾರೆ.

    ಪೆಟ್ಟಿಗೆ ಅಂಗಡಿಯೊಳಗೆ ಎಂದಿನಂತೆ ಮಾಲೀಕ ಗ್ಯಾಸ್ ಸಿಲಿಂಡರ್‌ಹಾಗೂ ಸ್ಟೌ ಬಳಸಿ ಟೀ, ವಡೆ ಹಾಗೂ ಬಜ್ಜಿ ತಯಾರು ಮಾಡಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸೋಮಣ್ಣ, ತಕ್ಷಣ ಹೊರ ಬಂದಿದ್ದಾರೆ. ಇದಾದ ಕೆಲ ಕ್ಷಣದಲ್ಲಿಯೇ ನೋಡ ನೋಡುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ.

    ಸ್ಫೋಟದ ಶಬ್ದ ಕೇಳಿ ಹೊರಬಂದ ಸುತ್ತಮುತ್ತಲಿನ ನಿವಾಸಿಗಳು ಪೆಟ್ಟಿಗೆ ಅಂಗಡಿ ಹೊತ್ತಿ ಉರಿದು ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೆ ಚಾಚುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಬಳಿಕ ಎಚ್ಚೆತ್ತು ನೀರನ್ನು ಕೊಡದಲ್ಲಿ ತಂದು ಎರಚುವ ಮೂಲಕ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ನಂತರ ಸಾರ್ವಜನಿಕರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅಂಗಡಿಯನ್ನು ಆವರಿಸಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪೆಟ್ಟಿಗೆ ಅಂಗಡಿ ಸುಟ್ಟು ಕರುಕಲಾಗಿತ್ತು.

    ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಎಸ್‌ಐ ವೀರಣ್ಣಾರಾಧ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    2ನೇ ಪ್ರಕರಣ: ಸಿಂಗಾನಲ್ಲೂರು ಗ್ರಾಮದ ಅರಳಿ ಮರದಿ ಬೀದಿಯಲ್ಲಿ ಒಂದು ವರ್ಷದ ಹಿಂದೆ ಸಿದ್ದರಾಜು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ ಅಂಗಡಿ ಮನೆ ನಿಗೂಢ ಸ್ಫೋಟದಿಂದ ಛಿದ್ರಗೊಂಡಿತ್ತು. ಇದರ ಶಬ್ದ 2 ಕಿ.ಮೀ. ಸುತ್ತಮುತ್ತಲ ದೂರಕ್ಕೂ ಕೇಳಿಸಿತ್ತು. ಅಲ್ಲದೆ ಈ ಸ್ಫೋಟದಿಂದ ಅಕ್ಕ ಪಕ್ಕದ ವಾಸದ ಮನೆಗಳ ಗೋಡೆ ಜಖಂಗೊಂಡಿತ್ತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts