More

    ಸಿಂಗಟಾಲೂರ ಬ್ಯಾರೇಜ್​ನಿಂದ 29,452 ಕ್ಯೂಸೆಕ್ ನೀರು ನದಿಗೆ

    ಮುಂಡರಗಿ: ತಾಲೂಕಿನ ತುಂಗಭದ್ರಾ ನದಿ ನೀರಿನ ಹರಿವು ಮೂರು ದಿನಗಳಿಂದ ಇಳಿಮುಖವಾಗುತ್ತಿದೆ. ಹಮ್ಮಿಗಿ ಬಳಿಯ ಸಿಂಗಟಾಲೂರ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 8 ಗೇಟ್​ಗಳ ಮೂಲಕ ಶುಕ್ರವಾರ 29,452 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

    ಮಲೆನಾಡಿನ ವಿವಿಧೆಡೆ ಸುರಿದ ಮಳೆಯಿಂದಾಗಿ ತುಂಗಾ ಹಾಗೂ ಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಹೀಗಾಗಿ ಸೆ. 22ರಂದು 1,07,570 ಕ್ಯೂಸೆಕ್ ನೀರನ್ನು ಸಿಂಗಟಾಲೂರ ಬ್ಯಾರೇಜ್​ನಿಂದ ನದಿಗೆ ಹರಿಬಿಡಲಾಗಿತ್ತು. ಸೆ.23ರಿಂದ ನದಿ ನೀರಿನ ಹರಿವು ಇಳಿಮುಖವಾಗುತ್ತ್ತ ಬಂದಿದ್ದು ಸೆ.23ರಂದು 59,752 ಕ್ಯೂಸೆಕ್ ನೀರು, ಸೆ. 24ರಂದು 38,245 ಕ್ಯೂಸೆಕ್ ನೀರು ಹಾಗೂ ಸೆ.25 ರಂದು 29,452 ಕ್ಯೂಸೆಕ್ ನೀರನ್ನು ಬ್ಯಾರೇಜ್​ನಿಂದ ನದಿಗೆ ಹರಿಬಿಡಲಾಗಿದೆ.

    ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಂಥ ಸಂದರ್ಭದಲ್ಲಿ ನದಿ ಭಾಗದ ಗ್ರಾಮಸ್ಥರು ಪ್ರವಾಹ ಸಮಸ್ಯೆ ಎದುರಿಸುವ ಭೀತಿಯಲ್ಲಿದ್ದರು. ಈಗ ನೀರಿನ ಹರಿವು ಇಳಿಮುಖವಾಗಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts