More

    ಸಾಹಿತ್ಯಕ್ಕಿದೆ ಸಂಸ್ಕೃತಿ, ಸಂಸ್ಕಾರ ಉಳಿಸುವ ಸಾಮರ್ಥ್ಯ

    ಹೊಳೆಹೊನ್ನೂರು: ಸಾಹಿತ್ಯಕ್ಕೆ ಸಮಾಜದ ಆಚಾರ ಹಾಗೂ ವಿಚಾರಗಳನ್ನು ಶಮನವಾಗಿಸುವ ಶಕ್ತಿ ಸೇರಿ ಕ್ರಾಂತಿಗಳನ್ನು ಶಾಂತಿಯನ್ನಾಗಿಸುವ ಸಾಮರ್ಥ್ಯ ಇದೆ ಎಂದು ಸಮ್ಮೇಳಾನಧ್ಯಕ್ಷೆ ಎಸ್.ಕೆ.ರಕ್ಷಿತಾ ಹೆಳೀದರು.

    ಶಿವಮೊಗ್ಗ ತಾಲೂಕಿನ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂಸ್ಕಾರ ಹಾಗೂ ಸಂಸ್ಕೃತಿ ಉಳಿಸುವ ಸಾಮರ್ಥ್ಯ ಮಾತೃ ಭಾಷೆಗಿದೆ ಎಂದರು.

    ಗ್ರಾಮೀಣ ಪ್ರತಿಭೆಗಳನ್ನು ಹೊರತರಬೇಕೆಂದು ಕುವೆಂಪು ಅವರ ಅಧಮ್ಯ ಬಯಕೆಯಾಗಿತ್ತು. ಕವಿ ಆಶಯವನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸತತ ಪ್ರಯತ್ನ ಮಾಡುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಹಲವಾರು ಕವಿಗಳು ಅನ್ಯ ಭಾಷೆಯವರಾಗಿದ್ದರೂ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆ ಅನನ್ಯ ಎಂದರು.

    ಮೂಲ ಕನ್ನಡಿಗರಾದ ನಾವು ಜವಾಬ್ದಾರಿ ಅರಿತು ಭಾಷೆ ಹಾಗೂ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು. ಕೆಲ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಾತೃಭಾಷೆ ಮಾತನಾಡಿದರೆ ದಂಡ ವಿಧಿಸುವ ಪದ್ಧತಿ ಇದೆ. ಅಂತಹ ಶಾಲೆಗಳಲ್ಲಿ ಇಂದಿನಿಂದಲೇ ಕನ್ನಡ ಕಡ್ಡಾಯ ಭಾಷೆಯನ್ನಾಗಿಸುವ ಪ್ರಯತ್ನ ಮಾಡಬೇಕೆಂದರು.</p><p>ಮಾತೃಭೂಮಿಯಲ್ಲಿ ಮಾತೃಭಾಷೆಗಿಂತ ಅನ್ಯ ಭಾಷೆಗಳಿಗೆ ಪ್ರಾತಿನಿಧ್ಯ ನೀಡುವುದು ಸರಿಯಲ್ಲ. ಮಹಿಳೆಯರು ಹಲವು ಕ್ಚೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದರೂ ಸಾಹಿತ್ಯ ವಿಭಾಗದಲ್ಲಿ ಹಿಂದೆ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಸಾಹಿತ್ಯಾಸಕ್ತಿ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಪರಿಷತ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪ್ರತಿಭಾವಂತ ಬರಹಗಾರರನ್ನು ಬೆಳಕಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿದೆ. ಮಕ್ಕಳು ಸಾಂಸ್ಕೃತಿಕ ಹಾಗೂ ಸಾಹಿತ್ಯವಾಗಿ ಹಿಂದೆ ಬೀಳಬಾರದು ಎಂದರು.

    ಜ್ಞಾನದೀಪ ಶಾಲೆ ಕಾರ್ಯದರ್ಶಿ ವಿ.ದೇವೇಂದ್ರ, ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸಿರಿಚೆನ್ನಿ, ಕೆ.ಆರ್.ಅನಘಾ, ಕೋಗಲೂರು ತಿಪ್ಪೇಸ್ವಾಮಿ, ವಿ.ಟಿ.ಸ್ವಾಮಿ, ಬಿ.ಪಾಪಯ್ಯ, ಪರಮೇಶ್ವರ ಕರೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts