More

    ಸಾವಿರ ಗಡಿ ದಾಟಿದ ಕೋವಿಡ್

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ನಾಗಾಲೋಟ ಮುಂದುವರಿದಿದೆ. ಶನಿವಾರ 49 ಜನರಿಗೆ ಸೋಂಕು ದೃಢಪಟ್ಟಿದ್ದು, 13 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

    ಶನಿವಾರದ ಸೋಂಕಿತರಲ್ಲಿ ಇಬ್ಬರು ನರ್ಸ್ ಸೇರಿದ್ದಾರೆ. ಈವರೆಗೆ 1,040 ಜನರಿಗೆ ಸೋಂಕು ಖಚಿತವಾಗಿದ್ದು, 570 ಜನರು ಸೋಂಕಿನಿಂದ ಗುಣವಾಗಿದ್ದಾರೆ. 27 ಜನರು ಮೃತಪಟ್ಟಿದ್ದಾರೆ. 443 ಪ್ರಕರಣಗಳು ಸಕ್ರಿಯವಾಗಿವೆ. ಶನಿವಾರ ಹಾವೇರಿ ತಾಲೂಕಿನ 8, ಶಿಗ್ಗಾಂವಿ, ರಾಣೆಬೆನ್ನೂರ ತಲಾ ಇಬ್ಬರು, ಹಿರೇಕೆರೂರ ತಾಲೂಕಿನ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

    ಹಾವೇರಿ ಅಶ್ವಿನಿನಗರದ 6 ಜನರಿಗೆ, ರಾಜೇಂದ್ರನಗರದ ಇಬ್ಬರಿಗೆ, ಶಿವಯೋಗೇಶ್ವರ ನಗರ, ಸಿದ್ಧಾರೂಢ ಕಾಲನಿ, ದೇಸಾಯಿ ಗಲ್ಲಿಯಲ್ಲಿನ ತಲಾ ಒಬ್ಬರಿಗೆ, ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ 6 ಜನರಿಗೆ, ಗುತ್ತಲ ಪಟ್ಟಣದ ಒಬ್ಬರಿಗೆ ಸೋಂಕು ತಗುಲಿದೆ. ಶಿಗ್ಗಾಂವಿ ಪಟ್ಟಣದ ಮಲ್ಲಿಕಾರ್ಜುನ ನಗರದ ನರ್ಸ್​ಗೆ, ಬಂಕಾಪುರದ ಕೊಟ್ಟಿಗೇರಿ, ಶಾಬಜಾರ್, ಖತೀಬ್​ನಗರ, ಸುಕೇದಕೇರಿ ಓಣಿಯಲ್ಲಿ ತಲಾ ಒಬ್ಬರಿಗೆ, ಶಡಗರವಳ್ಳಿ ಗ್ರಾಮದ ಇಬ್ಬರಿಗೆ ಸೋಂಕು ತಗುಲಿದೆ.

    ಹಿರೇಕೆರೂರ ಪಟ್ಟಣದ ಬಸವೇಶ್ವರ ನಗರದ 2ನೇ ಕ್ರಾಸ್​ನಲ್ಲಿಯ ಇಬ್ಬರಿಗೆ, ತಂಬಾಕದ ನಗರದ ಒಬ್ಬರಿಗೆ, ಮಾಸೂರ ಗ್ರಾಮದ ಇಬ್ಬರಿಗೆ, ಬೆಟಕೆರೂರ ಗ್ರಾಮದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರ ನಗರದಲ್ಲಿ ಸರ್ಕಾರಿ ಆಸ್ಪತ್ರೆ ನರ್ಸ್ ಸೇರಿ ಮೂವರಿಗೆ, ಸುಣ್ಣಕಲ್ಲಬಿದರಿ, ಗುಡ್ಡದಆನ್ವೇರಿ, ದೇವರಗುಡ್ಡ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.ಸವಣೂರ ಪಟ್ಟಣದ ಹಾವಣಗಿ ಪ್ಲಾಟ್, ಮಾಲತೇಶ ನಗರ, ಅಂಬೇಡ್ಕರ್ ನಗರದ ತಲಾ ಒಬ್ಬರಿಗೆ, ತಾಲೂಕಿನ ಹಿರೇಮುಗದೂರ, ಗ್ರಾಮದ ಇಬ್ಬರಿಗೆ, ತವರಮೆಳ್ಳಿಹಳ್ಳಿ ಗ್ರಾಮದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹಾನಗಲ್ಲ ಪಟ್ಟಣದ ಕಮತಗೇರಿ ಓಣಿಯ ಇಬ್ಬರಿಗೆ, ಹಳ್ಳೂರ ಓಣಿ, ವಿರಾಟ ನಗರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಬ್ಯಾಡಗಿ ಪಟ್ಟಣದ ಸಜ್ಜನಪೇಟೆ ಪ್ಲಾಟ್ ಹಾಗೂ ಖುರ್ದುಕೋಡಿಹಳ್ಳಿ ಗ್ರಾಮದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts