More

    ಹಿಂದುಗಳು ಜಾಗೃತರಾಗಬೇಕು

    ಧಾರವಾಡ: ವೀರ ಸಾವರ್ಕರ್ ತ್ಯಾಗಕ್ಕೆ ಈ ದೇಶದ ಜನತೆ ಇಂದು ಬೆಲೆ ಕೊಡದ ಸ್ಥಿತಿಯಲ್ಲಿ ನಾವಿದ್ದೇವೆ. ಸಾವರ್ಕರ್ ವಿಚಾರಗಳನ್ನು ಜೀವಂತ ಇಡಲು ಒಂದಿಷ್ಟು ಜನ ಶ್ರಮಿಸುತ್ತಿದ್ದರೆ, ಒಂದಿಷ್ಟು ಜನ ಅಪಮಾನ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
    ನಗರದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ದೇಶಭಕ್ತ ನಾಗರಿಕ ವೇದಿಕೆ ಹಾಗೂ ಹಿಂದು ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವೀರ ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
    ದೇಶದಲ್ಲಿ ಸಾವರ್ಕರ್ ಭಾವಚಿತ್ರ ಸುಡುತ್ತಾರೆ, ಅವಮಾನಿಸುತ್ತಾರೆ. ಈ ಸನ್ನಿವೇಶಗಳನ್ನು ಹಿಂದುಗಳಾದ ನಾವು ನೋಡಿಕೊಂಡು ಸುಮ್ಮನಾಗುತ್ತಿದ್ದೇವೆ. ಅವರಿಗೆ ಅಪಮಾನವಾದರೂ ಸ್ವೀಕರಿಸುವ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಕೇಳಿ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಸಾವರ್ಕರ್ ವಿಚಾರ ಧಾರೆಗಳನ್ನು ನಾವು ಜಾರಿಗೆ ತರದಿದ್ದರೆ ಈ ದೇಶವನ್ನು ಬಿಟ್ಟು ಓಡಿ ಹೋಗುವ ಸ್ಥಿತಿ ನಮಗೆ ಎದುರಾಗಲಿದೆ ಎಂದರು.
    ಸಾವರ್ಕರ್ ಮೊಮ್ಮಗ ರಂಜೀತ ಸಾವರ್ಕರ್ ಗೆಳೆಯ ಧನಂಜಯ ಶಿಂಧೆ ಮಾತನಾಡಿ, ಕಾಂಗ್ರೆಸ್ ನಡೆಯಿಂದ ಭಾರತ ದೇಶ ಸಂಪೂರ್ಣ ಹಿಂದು ರಾಷ್ಟ್ರವಾಗಲು ಸಾಧ್ಯವಾಗಿಲ್ಲ. ದೇಶ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಕೋಮು ಗಲಭೆ ನಡೆಯುತ್ತಿದ್ದರೂ ಹಿಂದುಗಳು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ಈ ನಿಟ್ಟಿನಲ್ಲಿ ಹಿಂದುಗಳು ಜಾಗ್ರತರಾಗಬೇಕಿದೆ ಎಂದರು.
    ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ, ಖಾಲಾಪಾನಿ ಶಿಕ್ಷೆ ಅನುಭವಿಸಿದ ಅಪ್ಪಟ ದೇಶಪ್ರೇಮಿ ವೀರ ಸಾವರ್ಕರ್ ಬಗ್ಗೆ ವಿಪಕ್ಷಗಳ ನಾಯಕರು ಅವಹೇಳನ ಮಾಡಿ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.
    ಆರ್​ಎಸ್​ಎಸ್ ಪ್ರಮುಖ ಶ್ರೀಧರ ನಾಡಗೀರ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿ ಬದುಕುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿ, ಆದರೂ ಏನೂ ಮಾಡಿಲ್ಲ ಎಂದು ಬದುಕುವ ನತದೃಷ್ಟ ದೇಶ ಭಾರತ ಮಾತ್ರ. ಎಲ್ಲಿಯವರೆಗೆ ಹಿಂದುಗಳಲ್ಲಿ ನನ್ನ ದೇಶಕ್ಕೆ ಅಪಮಾನವಾದರೆ ಸಹಿಸುತ್ತೇವೆಯೋ ಅಲ್ಲಿಯವರೆಗೆ ಈ ರೀತಿಯ ಘಟನೆಗಳು ಮರುಕಳಿಸುತ್ತವೆ. ಇಂದು ಬೌದ್ಧಿಕ ಸಂಘರ್ಷಗಳು ದೇಶದಲ್ಲಿ ನಡೆದಿವೆ. ಈ ಬಗ್ಗೆ ಹಿಂದುಗಳು ಜಾಗ್ರತರಾಗಬೇಕು ಎಂದರು.
    ಶಾಸಕ ಅಮೃತ ದೇಸಾಯಿ, ಪರಮಾತ್ಮ ಸ್ವಾಮೀಜಿ, ಆರ್.ಡಿ. ಕುಲಕರ್ಣಿ, ಜಯತೀರ್ಥ ಮಳಗಿ, ವಾಣಿಶ್ರೀ ಮೊಟೇಕರ್, ಜ್ಯೋತಿ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts