More

    ಸಾವಯವ ಪೀಕದಾನಿ ಅಳವಡಿಕೆ ಇಂದು

    ಹುಬ್ಬಳ್ಳಿ: 15 ಸಾವಯವ ಪೀಕದಾನಿಗಳನ್ನು (ಉಗುಳು ಸಂಗ್ರಹ ಬುಟ್ಟಿ) ನಗರದ ಶ್ರೀ ಸಿದ್ಧಾರೂಡ ರೈಲ್ವೆ ನಿಲ್ದಾಣದಲ್ಲಿ ಡಿ. 20ರಂದು ಬೆಳಗ್ಗೆ 11 ಗಂಟೆಗೆ ಅಳವಡಿಸಲಾಗುವುದು ಎಂದು ಯಂಗ್ ಇಂಡಿಯನ್ಸ್ ಹು-ಧಾ ಚಾರ್ಟ್ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವರ್ಣಗ್ರುಪ್ ಆಫ್ ಕಂಪನಿಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ ಸ್ಪಾನ್ಸರ್ ಕೊಟ್ಟಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಪ್ರಧಾನ ವ್ಯವಸ್ಥಾಪಕ ಅಜಯ್ ಸಿಂಗ್, ಡಿಜಿಎಂ ಅರವಿಂದ ಮಾಲಖೆಡೆ, ಗೋವಿಂದ ಜೋಶಿ, ಇತರರು ಉಪಸ್ಥಿತರಿರುವರು ಎಂದರು.

    ಇದು ಪ್ರಾಯೋಗಿಕ ಯೋಜನೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುವುದರ ಕುರಿತ ಯೋಜನೆ ರೂಪಿಸಲಾಗುವುದು. ಈಗ ಅಳವಡಿಕೆ ಮಾಡಿರುವ ಪೀಕದಾನಿಗಳನ್ನು ವರ್ಷದವರೆಗೆ ನಿರ್ವಹಣೆ ಮಾಡಲಾಗುವುದು. ನಂತರ ರೈಲ್ವೆ ಇಲಾಖೆ ಮುತುವರ್ಜಿ ವಹಿಸಲಿದೆ. ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಯಂಗ್ ಇಂಡಿಯನ್ಸ್ ವತಿಯಿಂದ ವಿಶೇಷ ಅಭಿಯಾನ ಆಯೋಜಿಸಿ ಜಾಗೃತಿ ಮೂಡಿಸಲಾಗುವುದು ಎಂದು ವಿವರಿಸಿದರು.

    ನಿರ್ಮಲಧಾರ ಎಂಬ ಹ್ಯಾಂಡ್​ಲೆಸ್ ಸ್ಯಾನಿಟೈಸರ್ ಯಂತ್ರವನ್ನೂ ಅಳವಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ಲಾಟ್​ಫಾಮರ್್​ಗಳಲ್ಲಿ ಅಂಧರಿಗೆ ಸಹಾಯವಾಗಲೆಂದು ಬ್ರೖೆಲ್ ಸಿಸ್ಟಮ್ ಅಳವಡಿಕೆ ಮಾಡಲಾಗುವುದು. ಇಂಥ ಕಾರ್ಯಕ್ರಮಗಳನ್ನು ಸಂಘ-ಸಂಸ್ಥೆಗಳು ಆಯೋಜಿಸಿದರೂ ಸಾರ್ವಜನಿಕರು ಹಾಗೂ ಪಾಲಿಕೆ ಸೇರಿ ಇತರೆ ಕಚೇರಿಯ ನೌಕರರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

    ಪದಾಧಿಕಾರಿಗಳಾದ ಅರ್ಚನಾ ಗೋವಿಂದ ಜೋಶಿ, ಸಚಿನ್ ಟೆಂಗಿನಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.

    ಏನಿದು ಸಾವಯವ ಪೀಕದಾನಿ? : ‘ಈಝಿ ಸ್ಪಿಟ್’ ಹೆಸರಿನ ಡಬ್ಬಿಗಳನ್ನು ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗುತ್ತದೆ. ಸಾರ್ವಜನಿಕರು ಉಗುಳುವುದಿದ್ದರೆ ಇದರಲ್ಲೇ ಉಗುಳಬೇಕು. ಇದು ತುಂಬಿದ ನಂತರ ಬೇರೆಡೆ ಸುರಿಯಲಾಗುತ್ತದೆ. ಡಬ್ಬಿಗಳಲ್ಲಿ ಮೈಕ್ರೋಮಾಲಿಕ್ಯುಲಸ್ ರಸಾಯನಯುಕ್ತ ಪೌಡರ್ ಹಾಕಿರುವುದರಿಂದ ಗೊಬ್ಬರದಂತಾಗುತ್ತದೆ. ಇದನ್ನು ಸಸಿ ಬೆಳೆಯಲು ಬಳಸಬಹುದು ಎಂದು ಡಾ. ಶ್ರೀನಿವಾಸ ಜೋಶಿ ತಿಳಿಸಿದರು.

    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts