More

    ಸಾವಯವ ಕೃಷಿ ಮಿಷನ್​ನಿಂದ ಕಲ್ಲಂಗಡಿಗೆ ಮಾರುಕಟ್ಟೆ ವ್ಯವಸ್ಥೆ

    ಸಾಗರ: ತಾಲೂಕಿನ ಚನ್ನಗೊಂಡ ಗ್ರಾಮದ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕಲ್ಲಂಗಡಿಗೆ ಸಾವಯವ ಕೃಷಿ ಮಿಷ್​ನಿಂದ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ.

    ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ 100 ಟನ್​ಗೂ ಹೆಚ್ಚು ಕಲ್ಲಂಗಡಿ ಹಣ್ಣಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕೃಷಿಕರು ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿ ಬೆಳೆದರೆ ಮಾರುಕಟ್ಟೆ ನಿರ್ವಿುಸಿಕೊಡುವ ಕೆಲಸ ನಮ್ಮದು ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ.ಶ್ರೀ ಆನಂದ್ ತಿಳಿಸಿದ್ದಾರೆ.

    ಚನ್ನಗೊಂಡ ಗ್ರಾಮದ ಕೋಗಾರಿನ ಮೇಲ್ಮಂಜಿಯಲ್ಲಿ ಸಾವಯವ ಕೃಷಿಕರ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿದ್ದ ಅವರು ರೈತರಿಂದ ಮಾಹಿತಿ ಪಡೆದರು. ರಾಸಾಯನಿಕ ಬಳಸಿ ಬೆಳೆಯುವ ಕಲ್ಲಂಗಡಿ ಬಳ್ಳಿಗಳು ಸೊರಗಿದ್ದು, ಗಾತ್ರವು ಸರಿಯಾಗಿ ಬಂದಿರುವುದಿಲ್ಲ. ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದರಿಂದ ಉತ್ತಮ ಫಸಲು ಬಂದಿವೆ ಎಂದು ತಿಳಿಸಿದರು.

    ಮಂಗನ ಕಾಯಿಲೆ, ಮಂಗಗಳ ಕಾಟದಿಂದ ಕಲ್ಲಂಗಡಿ ಉಳಿಸಿಕೊಳ್ಳುವುದೇ ಸಂಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸಾವಯವ ಕೃಷಿ ಮಿಷನ್ ನಮ್ಮ ಮನೆ ಬಾಗಿಲಿಗೆ ಬಂದು ಕಲ್ಲಂಗಡಿಗೆ ಮಾರುಕಟ್ಟೆ ನಿರ್ವಿುಸಿಕೊಡಲು ಮುಂದಾಗಿದೆ. ನಮ್ಮ ಭಾಗದಲ್ಲಿ 15ಕ್ಕೂ ಹೆಚ್ಚು ಬೆಳೆಗಾರರು ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದಿದ್ದೇವೆ ಎನ್ನುತ್ತಾರೆ ಕೃಷಿಕ ಗಣೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts