More

    ಸಾರ್ವಜನಿಕರಿಗೆ ಸಮರ್ಪಕ ಸೌಲಭ್ಯ ಕಲ್ಪಿಸಿ

    ಗದಗ: ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಗರಸಭೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಲಾಕ್​ಡೌನ್ ಅವಧಿಯಲ್ಲಿ ಮಾರುಕಟ್ಟೆಗಳಲ್ಲಿ ಹೂವು ಹಣ್ಣು ತರಕಾರಿ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ತಳ್ಳುವ ಗಾಡಿ ಹಾಗೂ ಆಟೋಗಳ ಮೂಲಕ ವ್ಯಾಪಾರಸ್ಥರು ಮನೆ ಮನೆಗೆ, ಓಣಿಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ’ ಎಂದರು.

    ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಆಟೋ ಚಾಲಕರ, ಮಾಲೀಕರ ಸಂಘ ಮತ್ತು ಟಂಟಂ ಗಾಡಿಗಳ ಮಾಲೀಕರ ಸಂಘ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದೊಂದಿಗೆ ಗುರುತಿಸಲಾದ ವ್ಯಾಪಾರಸ್ಥರೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

    ಪೌರಾಯುಕ್ತರು ತಮ್ಮ ಹಂತದಲ್ಲಿ ಸಭೆ ನಡೆಸಿ ಅಗತ್ಯ ಸೇವೆಗಳ ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿ ಪ್ರತಿದಿನ ಕಠಿಣ ಲಾಕ್​ಡೌನ್ ಅವಧಿಯಲ್ಲಿ ನೀಡಲಾದ ನಿರ್ದೇಶನ ಪಾಲನೆಯಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದರು.

    ಲಾಕ್​ಡೌನ್ ಅವಧಿಯಲ್ಲಿ ತರಕಾರಿ ದರಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ಕನಿಷ್ಠ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪ್ರತಿ ದಿನ ಖಾತ್ರಿಪಡಿಸಿಕೊಳ್ಳಲು ವಾರ್ಡ್​ವಾರು ಸಿಬ್ಬಂದಿಯನ್ನು ನೇಮಿಸಿ ಪರಿಶೀಲಿಸಬೇಕು. ಹೋಂ ಐಸೋಲೇಷನ್​ನಲ್ಲಿ ಇರುವವರು ಹೊರಗಡೆ ಬರಲು ಅವಕಾಶ ನೀಡಬಾರದು. ಕ್ವಾರಂಟೈನ್ ವಾಚ್ ಅವಧಿಯಲ್ಲಿ ಸೋಂಕಿತರ ಅಗತ್ಯಗಳನ್ನು ತಿಳಿದು ಪೂರೈಸಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಭಾರ ಯೋಜನಾ ನಿರ್ದೇಶಕ ಅನಿಲಕುಮಾರ ಮುದ್ದಾ, ಪೌರಾಯುಕ್ತ ರಮೇಶ ಜಾಧವ, ಯೋಜನಾ ನಿರ್ದೇಶಕರ ಕಾರ್ಯಾಲಯದ ಇಂಜಿನಿಯರ್ ಇದ್ದರು.

    ನೀರು ಪೂರೈಕೆ ಸಮರ್ಪಕವಾಗಿರಲಿ

    ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ವಾರ್ಡ್​ವಾರು ನೀರು ಪೂರೈಕೆಗೆ ನಿಗದಿಪಡಿಸಿದ ಅವಧಿಯಲ್ಲಿ ಕುಡಿಯುವ ನೀರು ಪೂರೈಸಬೇಕು. ವಾಲ್ವ್ ಮನ್​ಗಳು ಹಾಗೂ ಮೇಲ್ವಿಚಾರಕರು ಸರಿಯಾಗಿ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಈಗಾಗಲೇ ಮುಂಗಾರು ಮಳೆಗಾಲದ ಅವಧಿ ಆರಂಭವಾಗಿದ್ದು ಹೆಚ್ಚಿನ ಮಳೆಯಿಂದ ಚರಂಡಿಗಳು ಹೂಳು ತುಂಬಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಹೋಗುವ ಸಂಭವವಿದೆ. ಈ ಹಿಂದೆ ಮಳೆಗಾಲದ ಅವಧಿಯಲ್ಲಿ ಉಂಟಾಗಿರುವ ತೊಂದರೆಗಳನ್ನು ಗುರುತಿಸಿ ಅಂತಹ ಚರಂಡಿಗಳ ನಾಲಾಗಳಲ್ಲಿನ ಹೂಳು ತೆಗೆಸಿ ಸ್ವಚ್ಚಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts