More

    ಸಾಮೂಹಿಕ ವಿವಾಹದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ 103 ಜೋಡಿ

    ಬಾಗೇಪಲ್ಲಿ: ಚುನಾವಣೆ ಸಮಯದಲ್ಲಿ ಹಣ ಖರ್ಚು ಮಾಡಿದರೆ ಯಾರು ಬೇಕಾದರೂ ಎಂಎಲ್‌ಎ ಆಗಬಹುದು, ಆದರೆ ಉತ್ತಮ ಸಮಾಜಸೇವಕರು ಆಗುವುದು ಕಷ್ಟ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

    ಪಟ್ಟಣದ ಶ್ರೀಕ್ಷೇತ್ರ ಗಡಿದಂನಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬರಿಗೂ ವಿಜೃಂಭಣೆಯಿಂದ ಮದುವೆ ಮಾಡಬೇಕೆಂಬ ಆಸೆ ಮೂಡುತ್ತದೆ. ಆದರೆ ಈ ಅದ್ದೂರಿ ವಿವಾಹಗಳು ಸಮಾಜಕ್ಕೆ ಮಾರಕವಾಗಲಿದೆ. ಆದ್ದರಿಂದ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

    ಪ್ರತಿ ವಿವಾಹ ವಾರ್ಷಿಕೋತ್ಸವದ ದಿನದಂದು ಸಸಿ ನೆಟ್ಟು ಪರಿಸರ ಪ್ರೇಮಿಗಳಾಗಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ವಧು, ವರರನ್ನು ಆಶೀರ್ವದಿಸಿದರು.

    103 ಜೋಡಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಪತ್ನಿ ಶೀಲಾ ಸುಬ್ಬಾರೆಡ್ಡಿ ಅವರು ಮಾಂಗಲ್ಯ, ಕಾಲು ಉಂಗುರ, ಬಟ್ಟೆ ನೀಡಿ ಆಶೀರ್ವದಿಸಿರು.

    ತುಮಕೂರು ಹೀರೆಮಠ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಬಸವ ಕಲ್ಯಾಣ ಮಠದ ಪೀಠಾಧ್ಯಕ್ಷ ಮಹದೇವಸ್ವಾಮಿ, ಬೆಂಗಳೂರು ಸಿದ್ಧಾರೂಢ ಮಿಷನ್ ಅಶ್ರಮ ಅಧ್ಯಕ್ಷ ಆರೂಢ ಭಾರತಿ ಸ್ವಾಮೀಜಿ, ಮಾಜಿ ಸಂಸದ ಡಾ.ಎಂ.ವೀರಪ್ಪಮೊಯ್ಲಿ, ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ, ಮಾಜಿ ಅಧ್ಯಕ್ಷರಾದ ಕೆ.ಎಂ.ರಾಮರೆಡ್ಡಿ, ಎಸ್.ಎಸ್.ರಮೇಶ್‌ಬಾಬು, ಸಹಕಾರ ಮಹಾ ಮಂಡಲ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಕೋಚಿಮುಲ್ ನಿರ್ದೇಶಕ ಮಂಜುನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ, ಉಪಾಧ್ಯಕ್ಷ ವಿ.ಪ್ರಭಾಕರರೆಡ್ಡಿ, ಮುಖಂಡರಾದ ರಾಜಶೇಖರನಾಯ್ಡು, ಅಮರನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಬಿಳ್ಳೂರು ಕೆ.ಎಂ.ನಾಗರಾಜು ಇತರರಿದ್ದರು.

    ಸದ್ಯದ ಪರಿಸ್ಥಿತಿಯಲ್ಲಿ ಅಚಾರವೇ ಸ್ವರ್ಗ ಅನಾಚಾರವೇ ನರಕ ಎನ್ನುವಂತೆ ಪ್ರಕೃತಿಯಲ್ಲಿ ಬದಲಾವಣೆಗಳು ಆಗುತ್ತಿದ್ದು, ಬಡವರ ಸೇವೆ ಮಾಡುವವರನ್ನು ಮಾತ್ರ ಮಠಾದೀಶರು ಇಷ್ಟ ಪಡುತ್ತಾರೆ. ನವ ವಿವಾಹಿತರು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು.
    ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಹೀರೆಮಠ ಪೀಠಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts