More

    ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

    ಕಲಬುರಗಿ: ಸಂಭ್ರಮದಿಂದ ರಂಜಾನ್ ಆಚರಿಸುತ್ತಿದ್ದ ಮುಸ್ಲಿಂರು ಈ ಸಲ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಹಬ್ಬವನ್ನು ಸರಳವಾಗಿ ಆಚರಿಸುವಂತೆ ಈಗಾಗಲೇ ಮುಸ್ಲಿಂ ಸಮುದಾಯದ ಗಣ್ಯರು ಮನವಿ ಮಾಡಿದ್ದಾರೆ.
    ಈ ಮಧ್ಯೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್ ಅವರು ಕೋವಿಡ್-19 ಹಾವಳಿ ಹಿನ್ನೆಲೆಯಲ್ಲಿ ರಂಜಾನ್ ಸರಳ ಆಚರಣೆ ಮಾಡಬೇಕು. ಹಬ್ಬದ ಕಾಲಕ್ಕೆ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು, ಶುಭಾಶಯ ಕೋರಲು ಗುಂಪುಗೂಡುವುದು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
    ರಾಜ್ಯ ವಕ್ಫ್ ಬೋರ್ಡ್​ ಮಾರ್ಗಸೂಚಿ ಹೊರಡಿಸಿದ್ದು, ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರ
    ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು ಮತ್ತು ಸ್ನೇಹಿತರು, ಸಂಬಂಧಿಕರಿಗೆ ದೈಹಿಕವಾಗಿ ಪರಸ್ಪರ ತಬ್ಬಿಕೊಂಡು ಶುಭ ಕೋರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
    ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮುಸ್ಲಿಂ ಮುಖಂಡರ, ಮೌಲಾನಾಗಳ, ಮೌಲ್ವಿಗಳ ಸಭೆಗಳನ್ನು ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಮಾಡುವುದಿಲ್ಲ, ಮಸೀದಿಗಳಲ್ಲಿ ಮತ್ತು ಈದ್ಗಾಗಳಲ್ಲಿ ಜಮಾಗೊಳ್ಳುವುದಿಲ್ಲ, ಬದಲಿಗೆ ಸಕರ್ಾರ ಅವಕಾಶ ನೀಡುವವರೆಗೂ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ ಎಂದು ಆಯುಕ್ತರು ಹೇಳಿದರು.
    ಈ ಕುರಿತು ಜಾಗೃತಿ ಮೂಡಿಸಲು ವಕ್ಫ್ ಬೋರ್ಡ್​ ಸೂಚನೆಗಳನ್ನು ಉರ್ದು ಭಾಷೆಗೂ ಸಹ ತರ್ಜುರುಮೆ ಮಾಡಿ ಕರಪತ್ರಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ. ಕಂಟೈನ್ಮೆಂಟ್ ಜೋನ್ಗಳಲ್ಲಿರುವವರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸತೀಶಕುಮಾರ ತಿಳಿಸಿದರು.
    ದ್ವಿಚಕ್ರ ವಾಹನಗಳಲ್ಲಿ ಅನವಶ್ಯಕವಾಗಿ ಒಬ್ಬರಿಗಿಂತ ಹೆಚ್ಚಾಗಿ ಸುತ್ತಾಡುವುದನ್ನು ನಿಷೇಧಿಸಲಾಗಿದೆ. ನಗರಾದ್ಯಂತ ಕಲಂ 144 ಜಾರಿಯಲ್ಲಿದೆ. ಬಂದೋಬಸ್ತ್ಗಾಗಿ ಒಬ್ಬ ಡಿಸಿಪಿ, ಐದು ಜನ ಎಸಿಪಿ, 17 ಪಿಐ, ಪಿಎಸ್ಐ 5, ಎಎಸ್ಐ 50, ಎಚ್ಸಿ/ಪಿಸಿ 350, ಹೋಮ್ಗಾಡರ್್ 250, ಕೆಎಸ್ಆರ್ಪಿ ತುಕಡಿ 3, ಸಿಎಆರ್ ತುಕಡಿ 9 ಅಧಿಕಾರಿ ಸಿಬ್ಬಂದಿಯನ್ನು ಎಲ್ಲ ಸೂಕ್ಷ್ಮ ಪ್ರದೇಶದಲ್ಲಿ ನೇಮಿಸಲಾಗುತ್ತಿದೆ. ಸಿಸಿ ಕ್ಯಾಮೆರಾ ಮತ್ತು ಡ್ರೋಣ್ ಮೂಲಕ ನಿಗಾವಹಿಸಲಾಗುವುದು ಎಂದು ಸತೀಶಕುಮಾರ ತಿಳಿಸಿದ್ದಾರೆ.
    ಮುಸ್ಲಿಂರು ಈ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾರ್ಗಸೂಚಿ, ಲಾಕ್ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಎಚ್ಚರಿಸಿದ್ದಾರೆ.
    ರಂಜಾನ್ ಬಂದೋಬಸ್ತ್ ಮತ್ತು ಕಫ್ಯರ್ೂ ಜಾರಿಗೊಳಿಸುವ ಕುರಿತು ಪೊಲೀಸ್ ಆಯುಕ್ತರು ಡಿಸಿಪಿ ಕಿಶೋರಬಾಬು, ಎಸಿಪಿ ಗಂಗಾಧರ ಬಿ.ಎಂ.ಅವರೊಂದಿಗೆ ಚರ್ಚೆ ಸಹ ನಡೆಸಿದರು.

    ಸರ್ಕಾರದ ಸೂಚನೆಯಂತೆ ಭಾನುವಾರ ಕಫ್ಯರ್ೂ ಇರಲಿದೆ. ಅದಕ್ಕಾಗಿ ಎಲ್ಲ ತೆರನಾದ ಬಂದೋಬಸ್ತ್ ಮಾಡಲಾಗಿದೆ. ರಂಜಾನ್ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿ ಮತ್ತು ಅತ್ಯಗತ್ಯ ವಸ್ತುಗಳ ಅಂಗಡಿಗಳಿಗೆ ರಿಯಾಯಿತಿ ನೀಡಲಾಗಿದೆ. ಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ವಕ್ಫ್ ಬೋರ್ಡ ನಿಯಮಗಳನ್ನು ಉರ್ದುವಿನಲ್ಲಿ ಸಹ ಭಾಷಾಂತರ ಮಾಡಿ ಹಂಚಿಕೆ ಮಾಡಲಾಗಿದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗುತ್ತಿದೆ.
    | ಎನ್.ಸತೀಶಕುಮಾರ ಪೊಲೀಸ್ ಕಮೀಷನರ್ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts